ಬೆಂಗಳೂರು : ಇಂದು ನಡೆಯುತ್ತಿದ್ದ ಏರ್​ ಶೋ ಪಾರ್ಕಿಂಗ್​ ಬಳಿ ಅಗ್ನಿ ಅವಘಡ ಸಂಭವಿಸಿದೆ. ಗೇಟ್​ ನಂಬರ್​  05 ರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 300 ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.  ಹೀಗಾಗಿ ತಾತ್ಕಾಲಿಕವಾಗಿ ಏರ್​ ಶೋ ಸ್ಥಗಿತಗೊಳಿಸಲಾಗಿದೆ.ಹುಲ್ಲಿಗೆ ಬೆಂಕಿ ಬಿದ್ದಿದ್ದು, ಅದು ವ್ಯಾಪಿಸಿ ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರುಗಳಿಗೆ  ತಗುಲಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ಧಾರೆ.

RELATED ARTICLES  ನಾಯಿಗೆ ವಿಷ ಹಾಕಿ ಕಳ್ಳತನ , ಭಯದಲ್ಲಿ ತಮ್ಮ ಮೊಬೈಲ್'ನ್ನು ಬಿಟ್ಟು ಹೋದ ಕಳ್ಳರು

ಸುಮಾರು 300 ಕ್ಕೂ ಹೆಚ್ಚು ಕಾರುಗಳು ಹಾಗೂ ಎರಡು ಬೈಕ್​​ಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.  

 ದಟ್ಟ ಹೊಗೆ ಆವರಿಸಿದ್ದ ಹಿನ್ನಲೆ ಏರ್ ಶೋ ಪ್ರೇಕ್ಷಕರು ಆತಂಕಗೊಂಡಿದ್ದಾರೆ.ಬೆಂಕಿ ಅವಘಡ ಹಿನ್ನೆಲೆ ಡಿಜಿಪಿ ಎಂ.ಎನ್​. ರೆಡ್ಡಿ ಟ್ವೀಟ್​ ಮಾಡಿದ್ದಾರೆ. ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 300 ಕ್ಕೂ ಹೆಚ್ಚು ಕಾರುಗಳೂ ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುತ್ತಿದ್ದಾರೆ.

RELATED ARTICLES  ಇಂದಿನ ದಿನ ನಿಮಗೆ ಹೇಗಿದೆ ಗೊತ್ತಾ? ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ದಿನಾಂಕ 21-12-2018ರ ದಿನ ಭವಿಷ್ಯ ಇಲ್ಲಿದೆ

     ನಡುವೆ ಕೆಲವು ಕಾರುಗಳನ್ನು ತೆಗೆಯುವ ಮೂಲಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಒಣಗಿದ ಹುಲ್ಲು ಮತ್ತು ಜೋರಾಗಿ ಬೀಸಿದ ಗಾಳಿಯಿಂದಾಗಿ ಈ ಅನಾಹುತ ನಡೆದಿದೆ ಎಂದು ರಕ್ಷಣಾ ಇಲಾಖೆ  ಮಾಹಿತಿ ನೀಡಿದೆ.