ಶಿರಸಿ: ಇಷ್ಟು ವರ್ಷ ನಮ್ಮನ್ನಾಳಿದ ಕಾಂಗ್ರೆಸ್ ದಿವಾಳಿ ಆಗಬೇಕು, ನಮ್ಮ ದೇಶವನ್ನು ಭಾರತೀಯ ರಕ್ತವೇ ಆಳಬೇಕು, ವಿದೇಶಿ ಇಟಲಿ ರಕ್ತ ಬೇಡ ಎಂದು ಕೇಂದ್ರ ಸಚಿವ ಸಿದ್ದಾಪುರದಲ್ಲಿ ಕಾರ್ಯಕರ್ತರ ಜೊತೆ ಸಂವಾದ ನಡೆಸಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ 65 ವರ್ಷಗಳ ಆಡಳಿತ ಮತ್ತು ನಮ್ಮ ನಾಲ್ಕೂವರೆ ವರ್ಷ ಆಡಳಿತದಲ್ಲಿ ವ್ಯತ್ಯಾಸ ಇದೆ. ನಮ್ಮ ಸರ್ಕಾರ ಜನಪರ ಸರ್ಕಾರ. 65 ವರ್ಷ ಆಡಳಿತ ನಡೆಸಿದವರು ಜನರನ್ನು ಝೂನಲ್ಲಿ ಇಟ್ಟ ಪ್ರಾಣಿಗಳ ರೀತಿ ನಡೆಸಿಕೊಂಡರು. ಜನರನ್ನು ಭಿಕ್ಷುಕರ ರೀತಿ ನೋಡಿದ್ದಾರೆಂದು ವಾಗ್ದಾಳಿ ನಡೆಸಿದರು.
ನಾಲ್ಕೂವರೆ ವರ್ಷಗಳಲ್ಲಿ ನಾವು ಮಾಡಿದ ಸಾಧನೆಯನ್ನು ಜನರ ಮುಂದೆ ತೆರೆದಿಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಸಚಿವರು, ದೇಶ ಎಲ್ಲರಿಗೂ ಸೇರಿದ್ದು, ದೇಶದ ಬಗ್ಗೆ ನಮ್ಮ ಅನಿಸಿಕೆ ಹಂಚುವ ದೃಷ್ಟಿಯಿಂದ ಈ ಸಂವಾದ ನಡೆಸಲಾಗುತ್ತಿದೆ. ಎಂದರು.
ಕಾಂಗ್ರೆಸಿಗರು ಜನರ ಭಾವನೆಗಳ ಜೊತೆ ಚಕ್ಕಂದವಾಡಿದರು. ಇಂದು ಎಲ್ಲರೂ ವೋಟಿಗಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರ ಜಾತ್ಯಾತೀತ ಭಾವನೆ ಬಯಲಾಗಿದೆ. ಮಸೀದಿ ಚರ್ಚ್ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ. ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಇದು ಜಗತ್ತಿನಲ್ಲಿ ಸಿಗದ ಹೈಬ್ರೀಡ್ ಬೀಜ. ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರೀಡ್ ಬೀಜ ಬೇಕು ಎಂದರೆ ಅದು ಕಾಂಗ್ರೆಸ್ನಲ್ಲಿ ಮಾತ್ರ ಎಂದು ಟೀಕಿಸಿದರು.