ಶಿರಸಿ:ತಾಲ್ಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ನಡೆದಿದೆ.

ರುಕ್ಮಿಣಿ ಎಂಬುವವರು ವಾಸವಿದ್ದ ಮನೆಗೆ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ಚಿನ್ನಾಭರಣ, 12 ಸಾವಿರ ಹಣ ಸೇರಿದಂತೆ ದಿನಬಳಕೆ ವಸ್ತುಗಳೂ ಬೆಂಕಿಗೆ ಗುರಿಯಾಗಿದೆ.

RELATED ARTICLES  ಉತ್ತರ‌ಕನ್ನಡದಲ್ಲಿ ಕೊರೋನಾ ಆರ್ಭಟ : ಎಲ್ಲೆಲ್ಲಿ ಹೇಗಿದೆ ಗೊತ್ತಾ ಸೋಂಕು.

ಅಂಗಡಿಗಾಗಿ ತಂದಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಮಿಕ್ಸಿ, ಫ್ಯಾನ್, ಗ್ರ್ಯಾಂಡರ್, ಪಾತ್ರೆಗಳು ಸೇರಿದಂತೆ 2.5 ಲಕ್ಷ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

RELATED ARTICLES  ಸ್ಕೌಟ್ಸ್ ಸಂಸ್ಥಾಪಕ: ಬೇಡನ್ ಪೊವೆಲ್ ದಿನಾಚರಣೆ

ದೇವರಿಗೆ ಹಚ್ಚಿದ್ದ ದೀಪದಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕ ನಂದಿಸಿದರು. ಈ ಸಂಬಂಧ ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.