ಮೇಷ:- ಎಲ್ಲ ರೀತಿಯಲ್ಲೂ ಎಚ್ಚರಿಕೆ ಇರಲಿ. ಹಣದ ವಿಚಾರದಲ್ಲಿ ವಹಿಸಬೇಕಾದ ಮುತುವರ್ಜಿಯ ಬಗ್ಗೆ ವಿಶೇಷ ಸಲಹೆ ಸೂಚನೆಗಳನ್ನು ಅನ್ಯರಿಂದ ಪಡೆಯಬೇಕಾಗಿಲ್ಲ. ಸ್ವಯಂಪೂರ್ಣವಾದ ಪ್ರತಿಭೆ ನಿಮಗೇ ಇರುವುದರಿಂದ ಅದೃಷ್ಟ ನಿಮ್ಮ ಹಿಂದೆ ಇರುತ್ತದೆ.

ವೃಷಭ:- ಸರ್ಕಾರಿ ಕೆಲಸಗಾರರು ತೊಂದರೆದಾಯಕ ವರ್ಗಾವಣೆಗೆ ಸಜ್ಜಾಗಬೇಕಾಗಿದೆ. ನೀವು ಬಯಸಿದ ಕೆಲಸದಲ್ಲಿ ನೌಕರಿ ಮಾಡಬೇಕೆಂದಿದ್ದರೆ ಗುರುವಿನ ಮೊರೆ ಹೋಗುವುದು ಒಳ್ಳೆಯದು. ಶ್ರೀರಾಮರಕ್ಷಾ ಸ್ತೋತ್ರ ಪಠಿಸಿ.


ಮಿಥುನ:- ವಾಕ್‌ ಸ್ಥಾನದ ರಾಹು ನಿಮ್ಮ ಮಾತಿನ ವೈಖರಿಯಲ್ಲಿ ಬದಲಾವಣೆಯನ್ನುಂಟು ಮಾಡುವನು. ಬಾಯಿ ತಪ್ಪಿ ಆಡಿದ ಮಾತಿಗೆ ಕ್ಷ ಮೆ ಯಾಚಿಸುವುದರಲ್ಲಿ ತಪ್ಪಿಲ್ಲ. ಇಲ್ಲವಾದರೆ ಅನಗತ್ಯ ಟೀಕೆಗಳಿಗೆ ಗುರಿ ಆಗುವಿರಿ.

ಕಟಕ:- ಬಾಕಿ ಇರುವ ಹಣ ನಿಮಗೆ ಸಂದಾಯವಾಗುವುದು. ಮನೆಯಲ್ಲಿ ಬೇಡದ ವಸ್ತುಗಳನ್ನು ಗುಜರಿಗೆ ಹಾಕಿ. ಸ್ವಚ್ಛತಾ ಆಂದೋಲನವನ್ನು ಮನೆಯಿಂದಲೇ ಆರಂಭಿಸಿ. ಸ್ವಚ್ಛತೆಯಲ್ಲಿ ಭಗವಂತ ನೆಲೆಸಿರುತ್ತಾನೆ.

ಸಿಂಹ:- ಅರಣ್ಯದೊಳಗೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆ ಎಂತಯ್ಯಾ ಎಂಬ ಮಾತಿದೆ. ಸುಮ್ಮನೆ ಬರುವ ಟೀಕೆಗೆ ಹೆದರಬೇಡಿ. ನಿಮ್ಮ ವಿರುದ್ಧ ಮಾಡುತ್ತಿದ್ದ ಟೀಕಾಕಾರರಾನೇಕರು ನಿಮ್ಮ ಸಂಸಾರದ ಆಗುಹೋಗುಗಳ ಜವಾಬ್ದಾರಿ ತೆಗೆದುಕೊಳ್ಳವುದಿಲ್ಲ.

RELATED ARTICLES  ಕೊರೊನಾ ಲಸಿಕೆ ಪಡೆದ ಸಚಿವ ಹೆಬ್ಬಾರ್

ಕನ್ಯಾ:- ಬಯಸಿದ ಮಾರ್ಗವನ್ನು ಪಡೆಯುವ, ಅದೇ ಮಾರ್ಗದಲ್ಲಿ ಸಂಚರಿಸಿ ಯಶಸ್ಸನ್ನು ಸಂಪಾದಿಸುವ ವಿಶೇಷ ಶಕ್ತಿಯನ್ನು ಸಂಪಾದಿಸುತ್ತೀರಿ. ಎಲ್ಲಾ ರೀತಿಯ ಸರಳ ಪ್ರಯತ್ನಗಳೇ ಯಶಸ್ಸು ತರುತ್ತದೆ. ನಿಮ್ಮ ಉತ್ತಮವಾದ ಪ್ರಯತ್ನಗಳು ನಿರೀಕ್ಷಿತ ಯಶಸ್ಸು ತರುವವು.

ತುಲಾ:- ನೀವು ಕೈಗೊಳ್ಳುವ ಕೆಲಸ ವಿಚಾರದಲ್ಲಿ ಪೂರ್ವ ತಯಾರಿಗಳ ಬಗ್ಗೆ ಹೆಚ್ಚಿನ ಎಚ್ಚರ ಇರಲಿ. ಉತ್ತಮ ದಿನಗಳು ಬರುತ್ತವೆ ಅಲ್ಲಿವರೆಗೂ ನಿರಾಳವಾಗಿರೋಣ ಎಂದು ಉದಾಸೀನ ಮಾಡಬೇಡಿ. ನಿಶ್ಚಿತವಾದುದರ ಬಗೆಗಿನ ತಯಾರಿಗೆ ವಿಳಂಬ ಬೇಡ.

ವೃಶ್ಚಿಕ:- ದಣಿವರಿಯದೆ ಮುನ್ನುಗ್ಗುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ. ನಿಮ್ಮ ತಾಕಲಾಟದ ದಾರಿಯು ಅವಿರತ ಯಶಸ್ಸಿಗೆ ಹಿನ್ನಡೆ ತರುವುದು. ಆದರೆ ವಿಘ್ನ ವಿನಾಶಕ ಗಣಪತಿ ನಿಮ್ಮ ದಾರಿಯಲ್ಲಿನ ವಿಘ್ನಗಳನ್ನು ನಿವಾರಿಸಿ ಸುರಳವಾದ ಗುರಿಯನ್ನು ಮುಟ್ಟಿಸುವನು.

RELATED ARTICLES  ಮಂಗನಕಾಯಿಲೆ ತಡೆ ಲಸಿಕೆ ಸಾಮಥ್ರ್ಯ ವೃದ್ಧಿ ಸಂಶೋಧನೆಗೆ ಸಲಹೆ ಶಾಶ್ವತ ಪರಿಹಾರಕ್ಕೆ ರಾಘವೇಶ್ವರ ಶ್ರೀ ಒತ್ತಾಯ

ಧನುಸ್ಸು:- ನಿಮ್ಮ ಏಳಿಗೆಯನ್ನು ಸಹಿಸಲಾರದ ನಿಮ್ಮ ಹತ್ತಿರದ ಗುಂಪೊಂದು ನಿಮ್ಮನ್ನು ತೀವ್ರವಾಗಿ ಬಾಧಿಸುತ್ತಿದೆ. ಜನ್ಮಶನಿ ಕೆಲಸದಲ್ಲಿ ವಿಳಂಬ ಮಾಡುತ್ತಿರುವರು. ಶನಿ ದೇವಾಲಯದಲ್ಲಿ ಎಳ್ಳುದೀಪ ಹಚ್ಚಿ.

ಮಕರ:- ನಿಮ್ಮ ತಾಳ್ಮೆಯನ್ನು ಕೆಡಿಸಿಕೊಳ್ಳದೆಯೇ, ಇರುವ ಕೆಲಸ ಮುಂದುವರಿಸಿಕೊಂಡು ಮುನ್ನುಗ್ಗಿ. ನಿಮ್ಮ ಪಾಲಿನ ತೀವ್ರತರವಾದ ಮನದಾಳದ ಸದಿಚ್ಛೆಯು ಪೂರ್ಣಗೊಳ್ಳುವುದು. ಗುರುವಿನ ಅನುಗ್ರಹ ನಿಮ್ಮ ಮೇಲಿರುವುದರಿಂದ ಕಾರ್ಯಗಳು ಸುಲಲಿತವಾಗುವವು.

ಕುಂಭ:- ನೋವು ತರುವ ಮಾತುಗಳನ್ನಾಡುವ ಜನರನ್ನು ನಯವಾಗಿ ನಿರ್ಲಕ್ಷಿಸಿ. ಪ್ರಾಮಾಣಿಕವಾದ ನಿಮ್ಮ ನಡೆಯ ಶಕ್ತಿಯನ್ನು, ಸುಡುವ ದಾವಾಗ್ನಿಯೂ ಏನೂ ಮಾಡಲಾಗದೆ ಸೋಲುತ್ತದೆ. ಆಂಜನೇಯ ಸ್ವಾಮಿಯನ್ನು ಆರಾಧಿಸಿ. ಇದರಿಂದ ವರ್ಚಸ್ಸಿಗೆ ಬೇಕಾದ ಸಿದ್ಧಿ ದೊರೆಯುವುದು.

ಮೀನ:- ನಿಮ್ಮಲ್ಲಿ ಆನೆ ಬಲವಿದೆ. ಆದರೆ ದೂರದಿಂದ ಬೊಗಳುವ ಶ್ವಾನವನ್ನು ನೀವು ನಿಯಂತ್ರಿಸಲಾರಿರಿ. ಸಮತೋಲನ ತಪ್ಪದಂತೆ ಕುಟುಂಬದ ಜೊತೆ ವ್ಯವಹರಿಸಿ. ಆರೋಗ್ಯದ ಕಡೆ ಗಮನ ಹರಿಸಿ. ಮನೆ ವೈದ್ಯರ ಸಲಹೆ ಪಡೆಯಿರಿ.