ಕುಮಟಾ: ದೇಶ ಶೋಕದಲ್ಲಿ ಮುಳುಗಿ ಸಿಟ್ಟು, ಆಕ್ರೋಶ, ಆಕ್ರಂದನ ಹೊರಹಾಕುತ್ತಿರುವ ಈ ಕಾಲಘಟ್ಟದಲ್ಲಿ ಜನಸಮುದಾಯಕ್ಕೆ ಸಂಯಮ ಮತ್ತು ಆತ್ಮಸ್ಥೈರ್ಯ ತುಂಬುವ ಕವನಗಳನ್ನು ರಚಿಸಬೇಕಾಗಿದೆ. ರಕ್ತಪಾತವಿಲ್ಲದ, ಅಂಧಕಾರವಿಲ್ಲದ, ಕ್ರ್ಯೆಂ, ಮೋಸ, ಕಪಟತನಗಳ ಭಾವಸ್ಪಂದಿಸದಿರುವ ಕವಿಗಳಿಂದು ಕಂಗಾಲಾಗಿದ್ದಾರೆ. ಯುದ್ಧ ಯೋಚನೆ ಬೀಭತ್ಸಿಸುವ ಕ್ಷಣದ ಸಂದಿಗ್ಧತೆಯ ಸಂಕಟಕ್ಕೆ ಒಳಗಾದ ಕವಿ ಇಂದು ಕ್ಲಿಷ್ಟಕಾಲದಲ್ಲಿದ್ದಾನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎನ್.ಆರ್.ಗಜು ಅಭಿಪ್ರಾಯ ಪಟ್ಟಿದ್ದಾರೆ.

ಅವರು ತಾಲೂಕಿನ ಕೂಜಳ್ಳಿಯ ಸ್ಪಂದನ ಸಾಹಿತ್ಯ ವೇದಿಕೆ, ನಾಗ-ರೇವತಿ ಪ್ರಕಾಶನ ಹಾಗೂ ಗಣರಾಜ ಯಕ್ಷಗಾನ ಮಂಡಳಿ ಇವರ ಸಹಯೋಗದಲ್ಲಿ ಶ್ರೀ ಪ್ರಸಾದ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಕವಿ ಬೀರಣ್ಣ ನಾಯಕ ಹಿರೇಗುತ್ತಿ ಅವರು ರಚಿಸಿದ ಪುಲ್ವಾಮ ಹತ್ಯಾಕಾಂಡದ ‘ಪಾಕ್ ಗೆ ಎಚ್ಚರಿಕೆ’ ಕುರಿತ ಕವನವನ್ನು ವಿಶ್ಲೇಷಿಸಿ ಮಾತನಾಡುತ್ತಿದ್ದರು.

ಕವಿ ಕಲಾವಿದನಿಗೆ ಅಹಂಭಾವ ಹುಟ್ಟಿಕೊಂಡರೆ, ಮನ್ನಣೆಯ ಗೀಳು ಅಂಟಿಕೊಂಡರೆ ಅವನ ಭಾವುಕತೆ ನಾಶವಾಗುತ್ತದೆ. ಬಾಗುವಿಕೆ ಮಾಗುವಿಕೆ ಸಿದ್ಧಿಯಾದಾಗ ಮಾತ್ರ ಸಮರ್ಥ ಕವಿ ಹೊರಹೊಮ್ಮಬಲ್ಲ ಅಲ್ಲದೇ ಕಾವ್ಯಕೃಷಿ ಗಂಭೀರವಾಗಿ ಪರಗಣ ಸಿ ಬರೆದಾಗ ಕೂಜಳ್ಳಿಯಿಂದಲೂ ಸಾಕಷ್ಟು ಕವಿಗಳು ಹುಟ್ಟಿಕೊಳ್ಳಬಹುದೆಂದರು.

RELATED ARTICLES  ದಿನಕರ ಶೆಟ್ಟಿಯವರ ಪರ ಅಬ್ಬರದ ಪ್ರಚಾರಕ್ಕಿಳಿದ ವಿನಾಯಕ ನಾಯ್ಕ


ಕವಿಗೋಷ್ಠಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ರೋಹಿದಾಸ ನಾಯಕ ಉದ್ಘಾಟಿಸಿ ಸಾಹಿತ್ಯ ಹುಟ್ಟಿದ್ದೇ ಕಾವ್ಯದ ಮೂಲಕ, ರಾಜಾಶ್ರಯ ಪಡೆದ ಅಂದಿನ ಕವಿಗಳ ಹಾಗೂ ಅವರ ಕಾವ್ಯಗಳ ಐತಿಹಾಸಿಕ ಬೆಳಕು ಚೆಲ್ಲಿದರು. ಹಿರಿಯ ಚಿಂತಕ ಸಾಹಿತಿ ಪುಟ್ಟು ಕುಲಕರ್ಣಿ ಕಾವ್ಯ ಕಾಲಾತೀತವಾದುದೆಂಬುದನ್ನು ಉದಾಹರಿಸುತ್ತಾ, ಹೊಸ ಪೀಳಿಗೆಗೆ ಕಾವ್ಯವಸ್ತುವನ್ನು ಸೂಚಿಸುತ್ತಾ ಅವರಿಗಿರಬೇಕಾದ ಸಾಮಾಜಿಕ, ಸಾಂಸ್ಕøತಿಕ ಮತ್ತು ವ್ಯಯಕ್ತಿಕ ಬದ್ಧತೆಯ ಆಶಯ ನುಡಿಗಳನ್ನಾಡಿದರು. ಹೊಸ ಕವಿ ಕೃಷ್ಣಾನಂದ ಭಟ್ಟ ರಚಿತ ಪ್ರಸಾದ ಗಣಪತಿ ಸ್ತುತಿ ಕವಿಗೋಷ್ಠಿಗೆ ಮುನ್ನುಡಿ ಬರೆಯಿತು.

ಕವಿ ಗಣಪತಿ ಕೊಂಡದಕುಳಿ ಅವರ ಗರುಡ ಪುರಾಣ ನೆನಪಿಸುವ ಕಥನ ಕವನ ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯೆನಿಸಿತು. ಮನುಷ್ಯನ ವಿಕೃತ ಮನಸ್ಸಿನ ಕರಾಳ ಮುಖವನ್ನು ಹೆಣ ್ಣನ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಾ ಕವಯತ್ರಿ ಮಾಯಾ ನಾಯ್ಕ ‘ಮನವೇ ನೀ ಧಿಕ್ಕರಿಸು’ ಕವನ ಸಾದರ ಪಡಿಸಿದರು. ತಾಯಿ ಮಗಳ ಬಾಂಧವ್ಯದ ‘ಅಮ್ಮಾ ನೀ ದೀಪವಾದೆ’ ಎಂಬ ಮಕ್ಕಳ ಗೀತೆಯನ್ನು ಕವಯತ್ರಿ ಮಾಲಾ ನಾಯ್ಕ ವಾಚಿಸಿದರೆ ಕವಿ ಎನ್.ಆರ್.ನಾಯ್ಕ ಪ್ರಾಕೃತಿಕ ನಾವಿನ್ಯತೆಯಿಂದ ನಿರೂಪಿತ ‘ಬೆಳದಿಂಗಳು’ ಕವನ ಪ್ರಸ್ತುತ ಪಡಿಸಿದರು. ಹಳ್ಳಿಯ ಸೊಗಡನ್ನು ನೆಚ್ಚಿಕೊಳ್ಳುವಂತೆ ಮಾಡುವ ‘ನಗರ ಮತ್ತು ಹಳ್ಳಿ’ ಹೋಲಿಕೆಗೆ ಸಂಧ್ಯಾ ಭಟ್ಟರು ಕವನಸ್ಪರ್ಶ ನೀಡಿದರು. ಕೊನೆಯಲ್ಲಿ ಪ್ರೇಮ ಸಾಮ್ರಾಜ್ಯದ ರಾಜಕುಮಾರನ ಚಿಗುರದ ಆಸೆಗಳ ಕೂಡಿಟ್ಟ ‘ಕಾಲ ಚಕ್ರ’ವನ್ನು ಕವಯತ್ರಿ ಎಂ.ಕೆ.ಲಕ್ಷ್ಮೀ ಸ್ಫೋಟಿಸಿದರು.

RELATED ARTICLES  ಮಂಗಳಮುಖಿಯರಿಗೆ ಪೌಷ್ಠಿಕ ಆಹಾರದ ಕಿಟ್ ವಿತರಣೆ


ಪ್ರಾರಂಭದಲ್ಲಿ ಸಂಗೀತ ಶಿಕ್ಷಕಿ ರಂಜನಾ ಆಚಾರ್ಯ ಪ್ರಾರ್ಥಿಸಿದರು. ಗಣರಾಜ ಯಕ್ಷಗಾನ ಮಂಡಳಿ ವ್ಯವಸ್ಥಾಪಕ ಮತ್ತು ಕಲಾವಿದ ಮೋಹನ ಕೂಜಳ್ಳಿ ಸ್ವಾಗತಿಸಿದರು. ಸಂಘಟಕಿ ಎಂ.ಕೆ.ಲಕ್ಷ್ಮೀ ನಿರೂಪಿಸಿದರೆ, ಸಂಧ್ಯಾ ಭಟ್ಟ ನಿರ್ವಹಿಸಿದರು. ಅರ್ಚಕ ಗಣೇಶ ಹೆಗಡೆ ವಂದಿಸಿದರು. ವೇದಿಕೆಯ ಮೇಲೆ ಸ್ಪಂದನ ಸಾಹಿತ್ಯ ಸಂಘದ ಗೌರವಾಧ್ಯಕ್ಷ ಹಿರಿಯ ಕವಿ ವಿ.ಗ.ನಾಯಕ ಮಂಗಳೂರು, ಕವಿ ಸುರೇಶ ನಾಯ್ಕ, ನಿವೃತ್ತ ಅಧಿಕಾರಿ ಗೊನ್ಸಾಲಿಸ್ ಇತರರಿದ್ದರು. ಉಪನ್ಯಾಸಕರಾದ ಭೋಜರಾಜ್, ದಿಶಾರಾಜ್ ಮತ್ತು ಚೇತನ ನಾಯ್ಕ ಸಹಕರಿಸಿದರು.