ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ದೇವರ ದರ್ಶನಕ್ಕೆ ಬರುವ ನಿವೃತ್ತ ಮತ್ತು ಸೇವೆಯಲ್ಲಿರು ಭಾರತೀಯ ಸೈನಿಕರಿಗೆ ವಿಶೇಷ ಪ್ರಾಶಸ್ತ್ಯವನ್ನು ದೇವಾಲಯದ ಆಡಳಿತ ಕಲ್ಪಿಸಿದೆ. ಈ ಮೂಲಕ ಶ್ರೀ ರಾಮಚಂದ್ರಾಪುರ ಮಠ ಮಾದರಿ ಆಡಳಿತ ನೀಡುತ್ತಿದೆ ಎಂದು ಜನತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಲ್ಲಿ ಪ್ರವೇಶ ದ್ವಾರದಲ್ಲಿ ನಾಮಫಲಕವನ್ನು ಅಳವಡಿಸಿದ್ದು. ಕರ್ತವ್ಯ ನಿರ್ವಹಿಸುತ್ತಿರುವ ಅಥವಾ ನಿವೃತ್ತ ಹೊಂದಿದ ವೀರಯೋಧರು ದೇವಾಲಯದ ಕಾರ್ಯಾಲಯವನ್ನು ಸಂಪರ್ಕಿಸಿದರೆ, ಶ್ರೀ ದೇವರ ಶೀಘ್ರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದೆ.
ರಾಮಚಂದ್ರಾಪುರ ಮಠ ದೇವಾಲಯದ ಆಡಳಿತವನ್ನು ವಹಿಸಿಕೊಂಡಾಗಿನಿಂದ ಭಕ್ತರಿಗೆ ವಿವಿಧ ಅನುಕೂಲತೆಗಳನ್ನು ಕಲ್ಪಿಸಿದ್ದು, ಈಗ ನಮ್ಮೆ ಹೆಮ್ಮೆಯ ಸೈನಿಕರಿಗೂ ಶೀಘ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವುದಕ್ಕೆ ಭಕ್ತರು ಮತ್ತು ಜನರು ಸಂತಸ ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯ ಉತ್ತಮ ವ್ಯವಸ್ಥೆಯ ಆಡಳಿತ ಮುಂದುವರಿಯಲಿದೆ ಎಂದು ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ ಹೆಗಡೆ ಮಾಹಿತಿ ನೀಡಿದ್ದಾರೆ.