ಕುಮಟಾ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಕತಗಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ 112 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಅಡುಗೆ ಅನಿಲದ ಸಿಲಿಂಡರ್, ಗ್ಯಾಸ್ ಸ್ಟೌವ್ ಅನ್ನು ಗಜಾನನ ಪೈ ಯವರ ನಿವಾಸ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಮಾನ್ಯ ಶಾಸಕರಾದ ಶ್ರೀ ದಿನಕರ ಕೆ ಶೆಟ್ಟಿಯವರು ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ, ಅಡುಗೆ ಅನಿಲ ಸಂಪರ್ಕವಿಲ್ಲದ ಕಡುಬಡವರಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಅಡುಗೆ ಅನಿಲ ಸಂಪರ್ಕದ ಸೌಲಭ್ಯವನ್ನು ಒದಗಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿಲ್ಲಾ ಪಂಚಾಯತ ಸದಸ್ಯರಾದ ಗಜಾನನ ಪೈ ಬಾ.ಜ.ಪಾ ಯುವ ಮೋರ್ಚಾ ಕುಮಟಾ ಅಧ್ಯಕ್ಷರಾದ ಶ್ರೀ ವಿಶ್ವನಾಥ ನಾಯ್ಕ, ಶ್ರೀ ಪ್ರಶಾಂತ್ ನಾಯ್ಕ, ಶ್ರೀಮತಿ ರೇಖಾ ಭಟ್ಟ, ಶ್ರೀ ಸುಧೀರ್ ಗೌಡ, ಶ್ರೀ ಎಮ್.ಜಿ.ಭಟ್, ಶ್ರೀ ಹೆಮಂತ್ ಕುಮಾರ್, ಶ್ರೀ ವಿನಾಯಕ್ ಭಟ್, ಹಾಗೂ ಇನ್ನಿತರ ರು ಉಪಸ್ಥಿತರಿದ್ದರು.