ಕುಮಟಾ: ದಿನಾಂಕ 24/02/2019 .ಇಲ್ಲಿನ ಗಿಬ್ ಹೈಸ್ಕೂಲಿನ ಡಾ.ರಾಜೇಂದ್ರ ಪ್ರಸಾದ ಸಭಾಭವನದಲ್ಲಿ ಕುಮಟಾ ತಾಲೂಕಾ ಭಂಡಾರಿ ಸಮಾಜೋನ್ನತಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಖ್ಯಾತ ಚರ್ಮರೋಗ ತಜ್ಞರಾದ ಡಾ.ಸುಮಲತಾ ಪ್ರಣವ ಮಣಕೀಕರ್ ಅವರು ಉದ್ಘಾಟಿಸಿದರು. ದೇಶಭಂಡಾರಿ ಸಮಾಜವು ಸರ್ವರೀತಿಯಲ್ಲಿ ಅಭಿವೃದ್ಧಿಹೊಂದಬೇಕು.ಮುಖ್ಯವಾಗಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ತೋರಿಸುವ ಆಸಕ್ತಿಯನ್ನು ಮುಂದಿನ ವಿದ್ಯಾಭ್ಯಾಸದಲ್ಲೂ ಪ್ರದರ್ಶಿಸುವದರ ಮೂಲಕ ಉನ್ನತ ಸ್ಥಾನಮಾನಗಳನ್ನು ಹೊಂದಬೇಕೆಂದು ಕರೆನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಚಪ್ಟೇಗಾರ ಸಾರಸ್ವತ ಸಮಾಜದ ಜಿಲ್ಲಾಅಧ್ಯಕ್ಷರಾದ ಬೈಲೂರು  ಕೃಷ್ಣ ನಾಯಕ ಇವರು ಸಮಾಜದ ಅಭಿವೃದ್ಧಿಯು ಆಗಬೇಕಾದರೆ ಶಿಕ್ಷಣದ ಪ್ರಗತಿ ಆಗಬೇಕು ಎಂದರು.ಶಿರಸಿಯ ಸಮಾಜದ ಅಧ್ಯಕ್ಷ ನಾಗರಾಜ ನಾಯ್ಕ ಮಾತನಾಡಿ ಕರ್ನಾಟಕ ಸರಕಾರ ವಿಶೇಷ ಸವಲತ್ತು ನೀಡಲು ಗುರುತಿಸಿರುವ ಹಿಂದುಳಿದ ಸಮಾಜದ ಪಟ್ಟಿಯಲ್ಲಿ ದೇಶಭಂಡಾರಿ ಸಮಾಜದ ಹೆಸರು ಕೈ ತಪ್ಪಿದೆ ಕೂಡಲೇ ಇದನ್ನು ಸರಕಾರ ಸರಿಪಡಿಸಬೇಕೆಂದು ಆಗ್ರಹಿಸಿದರು.ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ನ್ಯಾಯವಾದಿ ವಿ ಎಂ ಭಂಡಾರಿಯವರು ವಹಿಸಿ ಮಾತನಾಡಿ.ನಮ್ಮ ಸಮಾಜ ಯುವಕ ಯುವತಿಯರು ಟಿವಿ ಮೊಬೈಲ್ ದಾಸರಾಗಿ ಭವಿಷ್ಯ ಕೆಡಿಸಿಕೊಳ್ಳುತ್ತಿದ್ದಾರೆ.ಪಾಲಕರು ಈ ದಿಸೆಯಲ್ಲಿ   ನಿಗಾವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಯಿತು.ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ವೇತನ,ಬಡ ವಿದ್ಯಾರ್ಥಿಗಳಿಗೆ ಕಲಿಕಾಸಾಮಗ್ರಿ ವಿತರಿಸಲಾಯಿತು. ಸಮಾಜದ ಹಿರಿಯರಾದ ಶ್ರೀ ಕೇಶವ ಅಡ್ಪೇಕರ್ ಹಾಗೂ ಅಪಘಾತ ರಹಿತ ಸೇವೆನೀಡಿ ನಿವೃತ್ತರಾದ ಚಾಲಕ ನಾಗೇಶ ವಿ ಭಂಡಾರಿಯವರನ್ನು ಸನ್ಮಾನಿಸಲಾಯಿತು. 

RELATED ARTICLES  ದುಡ್ಡಿನ ಚೀಲ ಹಿಡಿದು ಬಂದು ನಮ್ಮ ಜನರನ್ನು ಖರೀದಿಸಿ ಓಟು ತಗೊಂಡು ಶಾಸಕನಾಗಬಹುದು ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನವರು ಇದ್ದಾರೆ : ದಿನಕರ ಶೆಟ್ಟಿ.

 
ಆರಂಭದಲ್ಲಿ ನೃತ್ಯ ಸ್ವರ ಸಾಂಸ್ಕೃತಿಕ ತಂಡ ಹಾಗೂ ಉಳಿದವರು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.ಕಾರವಾರದ ಮೋಹನ ಕಿಂದಳಕರ ಹಾಗೂ ಕುಮಟಾ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಾ ಸುರೇಶ ಗಾಂವಕರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ತಾಲೂಕ ಅಧ್ಯಕ್ಷರಾದ ಶ್ರೀಧರ ಬೀರಕೋಡಿ ಸರ್ವರನ್ನೂ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ಅರುಣ ಮಣಕೀಕರ ವರದಿವಾಚನ ಮಾಡಿದರು.ಮಹಿಳಾ ಸಂಘದ ಕಾರ್ಯದರ್ಶಿ ಸುಲೋಚನಾ ಭಂಡಾರಿ ಆಟೋಟಗಳ ಫಲಿತಾಂಶ ಪ್ರಕಟಿಸಿದರು. 

   ಚಿದಾನಂದ ಭಂಡಾರಿ ಕಾಗಾಲ ಪ್ರಾಸ್ತಾವಿಕ ನುಡಿಗಳನ್ನಾಡಿ ಸಭೆಗೆ ಅತಿಥಿಗಳನ್ನು ಪರಿಚಯಿಸಿದರು. ಗೌರೀಶ ಭಂಡಾರಿ ಹಾಗೂ ಯಶಸ್ವಿನಿ ಅರುಣ ಮಣಕೀಕರ ಮತ್ತು ನಾಗರತ್ನ ಭಂಡಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಜಯಂತ ಮಣಕೀಕರ್ ವಂದಿಸಿದರು.ರಮೇಶ ಭಂಡಾರಿ,ಪ್ರಭಾಕರ ಮಣಕೀಕರ ಸಂಜಯ ಬೀರಕೋಡಿ ವಿಜಯ ಬೀರಕೋಡಿ ಮೊದಲಾದವರು ಸಹಕರಿಸಿದರು.

RELATED ARTICLES  ರಾಜ್ಯಮಟ್ಟದಲ್ಲಿ ಸಾಧನೆಮಾಡಿದ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯರು.