ಕುಮಟಾ: ಜನತಾ ವಿದ್ಯಾಲಯ ಮಿರ್ಜಾನ ಹೈಸ್ಕೂಲ್‍ನಲ್ಲಿ ಸ್ಕೌಟ್ ಸಂಸ್ಥಾಪಕರಾದ ಬೆಡೆನ್ ಪಾವೆಲ್‍ರವರ ಜನ್ಮದಿನದ ಆಚರಣೆಯನ್ನು ಆಚರಿಸಲಾಯಿತು. ಸರ್ವಧರ್ಮ ಪ್ರಾರ್ಥನೆ ನಂತರ ಸಭಾ ಕಾರ್ಯಕ್ರಮ ನಡೆಯಿತು. ನಿವೃತ್ತ ಸೈನಿಕರಾದ ಮೋಹನ್ ಡಿ ನಾಯ್ಕ ರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

RELATED ARTICLES  ವೈಜ್ಞಾನಿಕ ಚಿಂತನೆ ಬೆಳೆಸಿ- ಡಾ. ರವಿರಾಜ ಕಡ್ಲೆ

ಅವರು ಸೇವೆಯಲ್ಲಿದ್ದಾಗ ಜಮ್ಮು ಕಾಶ್ಮೀರದಲ್ಲಿ ಗಂಡಾಂತರದಿಂದ ಪಾರಾಗಿ ಬಂದ ಅನುಭವಗಳನ್ನು ಹಂಚಿಕೊಂಡರು. ಶಾಲೆಯ ಸಹ ಮುಖ್ಯಾಧ್ಯಾಪಕಿಯರಾದ ಶ್ರೀಮತಿ ಪ್ರೇಮ.ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಕೌಟ್ ವಿಶ್ವಮಟ್ಟದ ಸಾಧನೆ ಮಾಡಿದ ಶಿಕ್ಷಕ ಶ್ರೀ ರಾಜು ರಾಮ ನಾಯ್ಕ ಕಾರ್ಯಕ್ರಮ ಸಂಘಟಿಸಿದರು.

RELATED ARTICLES  ಚಂದಾವರದ ಹನುಮನ ಪಲ್ಲಕ್ಕಿ ಮೆರವಣಿಗೆ.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಣ ಸಂಯೋಜಕರಾದ ಶ್ರೀಮತಿ ಬೇಬಿ ವೈದ್ಯ ಹಾಗೂ ಹೈಸ್ಕೂಲ್ ಶಿಕ್ಷಕ ವೃಂದದವರು ಉಪಸ್ಥಿರಿದ್ದರು. ಗೈಯ್ಡ್ಸ್ ಕಾಪ್ಟನ್ ಸಂಧ್ಯಾ ಗೌಡ ನಿರೂಪಿಸಿದಳು. ಯಮುನಾ ನಾಯ್ಕ ವಂದಿಸಿದಳು.

ವರದಿ:ಎನ್.ರಾಮು.ಹಿರೇಗುತ್ತಿ