ಕಾರವಾರ : ಸ್ಥಳೀಯ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ ಕಾರವಾರದಲ್ಲಿ ವಿದ್ಯಾರ್ಥಿ ಸಂಘದ ಹಾಗೂ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಸಮಾರಂಭವು ನೆರವೇರಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಂಕಗಳಿಕೆಯೊಂದೆ ಮಾನದಂಡವಾಗಿ ಪರಿಗಣಿಸದೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿ ಕೊಳ್ಳಿ“ ಎಂದು ಕಾರವಾರದ ಉಪ ವಿಭಾಗಧಿಕಾರಿಗಳಾದ ಶ್ರೀ ಅಭಿಜಿನ್.ಬಿ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

RELATED ARTICLES  ಬೋಧಕರಿಂದಷ್ಟೇ ಸಮರ್ಥ ಸಮಾಜದ ನಿರ್ಮಾಣ ಸಾಧ್ಯ :-ಬಿ. ಎಸ್. ಗೌಡ.


ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರರಾದ ಡಾ.ಶಿವಾನಂದ.ವಿ.ನಾಯಕ ವಹಿಸಿ ಜೀವನ ಮೌಲ್ಯಗಳ ಜೊತೆಗೆ ಸಾಮಾನ್ಯ ಪ್ರಜ್ಞೆ ರೂಡಿಸಿ ರಾಷ್ಟ್ರ ಸೇವನಾ ಮನೋಭಾವದ ಕೂರಿತು ತಿಳಿಸಿದರು.
ಪ್ರಶಿಕ್ಷಣಾರ್ಥಿ ರೋಸ್ ಮಾರಿಯಾರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಮತಿ ನಯನಾ ನಾಯ್ಕ ಉಪಾದ್ಯಕ್ಷರು ವಿದ್ಯಾರ್ಥಿ ಸಂಘ ಇವರು ಸಭಿಕರನ್ನು ಸ್ವಾಗತಿಸಿದರು.

RELATED ARTICLES  ಕೇರವಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದೇವಳಮಕ್ಕಿ ಆದರ್ಶ ವಿದ್ಯಾಲಯದ ಬಾಲಕರ ಮತ್ತು ಬಾಲಕಿಯರ ಸಾಧನೆಗೆ ಹಳೆ ವಿದ್ಯಾರ್ಥಿಗಳ ಮೆಚ್ಚುಗೆ

ಬಂದಂತಹ ಮಹನೀಯರನ್ನು ಉಪನ್ಯಾಸಕರಾದ ಡಾ. ನವೀನ ದೇವರಬಾವಿ ಪರಿಚಯಿಸಿದರು. ದೈಹಿಕ ನಿರ್ದೇಶಕರಾದ ಶ್ರೀ ಶಂಕರ ಚಾಪೋಲೇಕರ ಸರ್ವರನ್ನು ವಂದಿಸಿದರು. ಈ ಕಾರ್ಯಕ್ರಮವನ್ನು ಡಾ.ಮಾಧವಿ ಗಾಂವಕರ ನಿರೂಪಿಸಿದರು.