ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ವಿಷಯಗಳ ಸುಧಾರಣೆಯಲ್ಲಿ ಬೇವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರೆ ನಂಬಲೇಬೇಕು. ಸೌಂದರ್ಯವನ್ನು ಕಾಪಾಡಿಕೊಳ್ಳಲು ಹಲವು ರೀತಿಯ ಕಾಸ್ಮೋಟಿಕ್ ಮತ್ತು ಔಷಧಿಗಳ ಮೊರೆ ಹೋಗುತ್ತೇವೆ. ಆದರೆ ನಮ್ಮ ಸುತ್ತ ಮುತ್ತಲಿರುವ ಕೆಲ ಗಿಡ ಮೂಲಿಕೆಗಳನ್ನು ಬಳಸಿ ಕೂಡ ನೈಸರ್ಗಿಕ ವಿಧಾನದಿಂದ ಸೌಂದರ್ಯವನ್ನು ವೃದ್ದಿಸಿಕೊಳ್ಳಬಹುದು. ಇಂತಹ ಸೌಂದರ್ಯವರ್ಧಕಗಳಲ್ಲಿ ಬೇವಿನ ಮರವು ಅತ್ಯಂತ ಪ್ರಯೋಜನಕಾರಿಯಾಗಿದೆ. ಬೇವಿನಿಂದ ಸಿಗುವ ಹಲವು ಉಪಯೋಗಗಳು ಇಲ್ಲಿವೆ.

 * ಮೊಡವೆ ಸಮಸ್ಯೆಗೆ ಪರಿಹಾರ : ಬೇವಿನ ಎಲೆಗಳನ್ನು 3-4 ಕಪ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಎಲೆಗಳ ಬಣ್ಣ ಬದಲಾದ ಮೇಲೆ ನೀರನ್ನು ತಣ್ಣಗಾಗಿಸಿ. ಬಳಿಕ ಬೇವಿನ ಎಲೆಗಳನ್ನು ಕಿವಿಚಿ ಮೊಡವೆ ಮೇಲೆ ಹಚ್ಚಿಕೊಳ್ಳುವುದರಿಂದ ಮೊಡವೆ ಸಮಸ್ಯೆಗೆ ಪರಿಹಾರ ಕಾಣಬಹುದು.

RELATED ARTICLES  ಜೀರಿಗೆ ನೋಡಲು ಚಿಕ್ಕದಾದರೂ ಅದರ ಉಪಯೋಗಗಳು ಬಹಳಷ್ಟಿವೆ..!!

* ಬೆವರುಸಾಲೆಗೆ ಮನೆಮದ್ದು : ದೇಹದ ಮೇಲೆ ಬೆವರುಸಾಲೆಗಳು ಉಂಟಾಗುತ್ತಿದ್ದರೆ, ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ ಸ್ನಾನ ಮಾಡಿ. ಹೀಗೆ ನಿರಂತರ ಮಾಡುವುದರಿಂದ ಬೆವರುಸಾಲೆ ಸಮಸ್ಯೆಯನ್ನು ತೊಡೆದು ಹಾಕಬಹುದು.

  * ತಲೆಹೊಟ್ಟಿನ ಸಮಸ್ಯೆ : ಬೇವಿನ ಎಲೆಯ ಪುಡಿ, ತೆಂಗಿನ ಎಣ್ಣೆ ಮತ್ತು ನಿಂಬೆ ರಸ ಮಿಶ್ರಣ ಮಾಡಿ ಪೇಸ್ಟ್​ ಅನ್ನು ತಯಾರಿಸಿ. ಇದನ್ನು ವಾರಕ್ಕೆ ಮೂರು ಬಾರಿ ಶ್ಯಾಂಪೂ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ತಲೆಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

RELATED ARTICLES  ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯಕರ ಸಲಹೆಗಳು.

  * ತ್ವಚೆಯ ಆರೈಕೆ : ಬೇವಿನ ಎಲೆಗಳನ್ನು ಪುಡಿ ಮಾಡಿ ನೀರು ಮತ್ತು ರಾಪೀಸ್ಡ್ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಪೇಸ್ಟ್​ ರೂಪದಲ್ಲಿ ತಯಾರಿಸುವ ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ, ಒಣಗಿದ ಬಳಿಕ ಮುಖವನ್ನು ತೊಳೆದುಕೊಳ್ಳಿ. ಪ್ರತಿ ವಾರ ಹೀಗೆ ಮಾಡುವುದರಿಂದ ತ್ವಚೆಯಲ್ಲಿ ಬದಲಾವಣೆಯನ್ನು ಕಾಣುವಿರಿ.