ಕುಮಟಾದ ಕೊಂಕಣ ಎಜ್ಯುಕೇಶನ  ಟ್ರಸ್ಟ್ ನ ಸಿ ವಿ ಎಸ್ ಕೆ ಹೈಸ್ಕೂಲ್ ನಲ್ಲಿ ಇಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಉಗ್ರನೆಲೆಗಳನ್ನು ನಾಶಮಾಡಿ ಪುಲಮಾವ ದಾಳಿಯ ವಿರುದ್ಧ ತೆಗೆದು ಕೊಂಡ ಪ್ರತೀಕಾರ ಕ್ರಮವನ್ನು ಬೆಂಬಲಿಸಿ ವಿಜಯೋತ್ಸವವನ್ನು ಆಚರಿಸಲಾಯಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜಯಘೋಷ ಮೊಳಗಿಸಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕ ಚಿದಾನಂದ ಭಂಡಾರಿ  ಕೊಂಕಣ ಎಜ್ಯುಕೇಶನ್ ಟ್ರಸ್ಟನ ಧ್ಯೇಯವಾಕ್ಯವೇ “ರಾಷ್ಟನಿರ್ಮಾಣ ಮಂದಿರವಿದು ಕೈ ಮುಗಿದು ಒಳಗೆ ಬಾ.” ಎಂಬುದಾಗಿದ್ದು ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಣಕಣದಲ್ಲೂ ರಾಷ್ಟ್ರಭಕ್ತಿಯನ್ನು ಮೂಡಿಸುವುದೇ ನಮ್ಮಗುರಿ.ಭಾರತದ ವೀರ ಸೈನಿಕರ ಸಾಹಸವನ್ನು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಂಪೂರ್ಣವಾಗಿ ಬೆಂಬಲಿಸುತ್ತದೆ.ಉಗ್ರರಿಂದ ಸಾವನ್ನಪ್ಪಿದ ಯೋಧರ ಕುಟುಂಬದ ನೋವಿನಲ್ಲಿ ನಾವೆಲ್ಲರೂ ಭಾಗಿಗಳು.
ನಾಳೆ ದೇಶದ ಮೇಲೆ ಯುದ್ಧದ ಕಾರ್ಮೋಡ ಕವಿದರೆ ಎಲ್ಲರೂ ದೇಶದ ಗೆಲುವಿ ತಮ್ಮ ಕೊಡುಗೆ ನೀಡಲು ಸಿದ್ಧರಿರಬೇಕೆಂದು ಕರೆನೀಡಿದರು.

RELATED ARTICLES  ಶಿರಸಿಯಲ್ಲಿ 22 ಶಂಕಿತ ಡೆಂಘೀ ಪ್ರಕರಣ : ಆರು ಜನರಲ್ಲಿ ಡೆಂಘೀ ಇರುವುದು ದೃಢ


ವಿದ್ಯಾರ್ಥಿಗಳುಮುಗಿಲು ಮುಟ್ಟುವ ಹಾಗೆ ಜೈಜವಾನ್ ಜೈಕಿಸಾನ್ ,ಭಾರತಮಾತಾಕೀಜೈ,ವಂದೇಮಾತರಂ ಘೋಷಣೆಗಳನ್ನು ಕೂಗಿ ಹರ್ಷವ್ಯಕ್ತಪಡಿಸಿದರು.ಈ ಸಂಧರ್ಭದಲ್ಲಿ ಮುಖ್ಯಾಧ್ಯಾಪಕಿ ಸುಮಾ ಪ್ರಭು ಆರ್ ಎಚ್ ದೇಶ ಭಂಡಾರಿ ರಾಜೇಶ ಎಚ್ ಜಿ ಜಯರಾಜ್ ಶೇರುಗಾರ ರವೀಂದ್ರ ಕಿಣಿ ವಿನಾಯಕ ಹೆಗಡೇಕರ್ ಗೀತಾ ಮೂಳೆ ನಾಗರಾಜ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಸಿ.ಎಂ ಭೇಟಿ ಹಿನ್ನೆಲೆ ಶಿರಸಿಯಲ್ಲಿ ನಡೆಯಿತು ಪತ್ರಿಕಾಗೋಷ್ಟಿ.