ಕುಮಟಾ: ಇಂದು ನಮ್ಮ ಸೇನೆ ಪಾಕ್ ಉಗ್ರರನ್ನು ಸದೆಬಡಿದ ವಿಜಯೋತ್ಸವವನ್ನು ಹಿರೇಗುತ್ತಿಯಲ್ಲಿ ಆಚರಿಸಿದರು.
ಸುಮಾರು 300 ಕ್ಕಿಂತ ಹೆಚ್ಚು ಪಾಕ್ ಉಗ್ರರನ್ನು ನಮ್ಮ ಕೆಚ್ಚೆದೆಯ ಸೈನಿಕರು ಹೊಡೆದುರುಳಿಸಿ ಪ್ರತೀಕಾರ ತೀರಿಸಿ ಕೊಂಡು ದೇಶದ ನಾಗರೀಕರ ಮನ ತಣಿಸಿದ್ದಕ್ಕಾಗಿ ಸಂಭ್ರಮದ ವಿಜಯೋತ್ಸವ ವನ್ನು ಆಚರಿಸಲಾಯಿತು .
ಟೀಮ್ ಮೋದಿ ಊರ ನಾಗರಿಕರು ಹಾಗೂ ಶಾಲಾ ಮಕ್ಕಳೊಂದಿಗೆ ಸೇರಿ ಈ ಸಂಭ್ರಮವನ್ನು ಆಚರಿಸಿದ್ದಾರೆ.
ನಮ್ಮ ಸೇನೆ ನಮ್ಮ ಹೆಮ್ಮೆ ,ದೇಶದ ಸೈನಿಕರಿಗೆ ಹಾಗೂ ನಮ್ಮ ಸಮರ್ಥ ನಾಯಕ ರಾದ ಪ್ರಧಾನಿ ಮೋದಿ ಜಿ ಯವರಿಗೆ ಜೈ ಕಾರ ಹಾಕುತ್ತಾ ಸಂಭ್ರಮಿಸಲಾಯಿತು.
ನಮ್ಮ ಮಡಿದ ಸೈನಿಕರ ವೈಕುಂಠ ಸಮಾರಾಧಾನೆಗೂ ಮುನ್ನ ಪಾಕ್ ಉಗ್ರರನ್ನು ಸದೆ ಬಡೆದು ವೀರ ಮರಣ ವನ್ನೋಪ್ಪಿದ ನಮ್ಮ ಸೈನಿಕರ ಆತ್ಮಗಳು ನೆಮ್ಮದಿಯಿಂದ ಸ್ವರ್ಗ ಸೇರುವಂತೆ ಮಾಡಿದ ನಮ್ಮ ಸೈನಿಕರಿಗೆ ಹಾಗೂ ನಮ್ಮ ನೆಚ್ಚಿನ ಮೋದಿಜಿಗೆ ಅಭಿನಂದನೆ ತಿಳಿಸಿದರು.