ಯಕ್ಷಗಾನವೆಂಬುದು ಒಂದು ಸುಂದರವಾದ ರಂಗ ಕಲೆ. ಬಹುಶಃ ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನುದ್ದಕ್ಕಷ್ಟೇ ಸೀಮಿತವಾಗಿದ್ದ ಈ ರಂಗಪ್ರಾಕಾರ ಇವತ್ತು ಬಹಳವಿಸ್ತಾರವಾಗಿಯೂ, ಆಳವಾಗಿಯೂ ಇಡೀ ಜಗತ್ತಿನಾದ್ಯಂತ ಹಬ್ಬಿಕೊಳ್ಳುತ್ತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ.
ಭಾರತ ಮತ್ತು ಪೋರ್ಚುಗಲ್ ನ ಸಹಯೋಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ, ಸುವರ್ಣಮಹೋತ್ಸವ ಸಭಾಂಗಣದಲ್ಲಿ ದಿ.20.02.2019 ರಿಂದ 23.02.2019ರವರೆಗೆ ನಡೆದ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮ್ಮೇಳನದಲ್ಲಿ ನಮ್ಮ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾಗೋಡಿನ ಕು. ಶ್ರೀಗಣೇಶ ಸುಬ್ರಾಯ ಹೆಗಡೆಯವರ ಯಕ್ಷಗಾನ ಪ್ರದರ್ಶನ ವಿದೇಶಿಗರೂ ಸೇರಿದಂತೆ ಎಲ್ಲರ ಮನಸೆಳೆಯಿತು.
ಮಾಗೋಡಿನ ಕು. ಶ್ರೀಗಣೇಶ ಸುಬ್ರಾಯ ಹೆಗಡೆಯವರಿಗೆ ಸತ್ವಾಧಾರ ಬಳಗ ಶುಭ ಹಾರೈಸಿದೆ.