ತುಮಕೂರು: ಮಾರ್ಚ್ 20 ರ ವಿಶ್ವ ಗುಬ್ಬಿ ದಿನದ ಅಂಗವಾಗಿ ತುಮಕೂರಿನ ಗುಬ್ಬಚ್ಚಿ ಸಂಘ ಐದರಿಂದ ಹತ್ತನೇ ತರಗತಿಯಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ.
ಆಸಕ್ತ ವಿದ್ಯಾರ್ಥಿಗಳು ಪರಿಸರ ಮಾಲಿನ್ಯದಿಂದ ಪಕ್ಷಿಗಳ ಮೇಲಾಗುವ ಪರಿಣಾಮ ಎಂಬ ವಿಷಯದ ಮೇಲೆ 2 ಪುಟಗಳಿಗೆ ಮೀರದಂತೆ ಬರೆದ ಪ್ರಬಂಧವನ್ನು ತಮ್ಮ ಶಾಲಾ ಮುಖ್ಯಸ್ಥರ ಸಹಿಯೊಂದಿಗೆ ಪ್ರಕಾಶ್ ಕೆ.ನಾಡಿಗ್, ಅಭಯ್ ರಾಘವಿ, ನಂ- 103, 5 ನೇ ಅಡ್ಡರಸ್ತೆ, ಸ್ನೇಹ ಕ್ಲಿನಿಕ್ ಹಿಂಭಾಗ, ಬೋವಿಪಾಳ್ಯ ಹತ್ತಿರ, ಬಾಲಾಜಿ ನಗರ, ಊರುಕೆರೆ, ತುಮಕೂರು- 572106 ಇಲ್ಲಿಗೆ ಮಾರ್ಚ್ 10 ನೇ ತಾರೀಖಿನೊಳಗೆ ಕೋರಿಯರ್ ಮೂಲಕ ಮಾತ್ರವೇ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 8277646419 ಸಂಪರ್ಕಿಸಬಹುದಾಗಿದೆ ಎಂದು ಪ್ರಕಾಶ್ ನಾಡಿಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.