ನವದೆಹಲಿ:   ಇಂದು ಭಾರತೀಯ ವಾಯು ಸೇನಾ ಮಿಗ್​-21 ಯುದ್ಧ ವಿಮಾನ ಪತನವಾಗಿದೆ. ಜಮ್ಮು ಕಾಶ್ಮೀರದ ಬುದ್ಗಾಮ್​ನಲ್ಲಿ  ಈ ಅಪಘಾತ ನಡೆದಿದ್ದು, ಇಬ್ಬರು ಪೈಲಟ್​ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES  ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ : ಮೈಸೂರು ಯುವರಾಜ ಯದುವೀರ್‌.

ಈ ವಿಮಾನ ಪತನಕ್ಕೆ ಕಾರಣ ತಾಂತ್ರಿಕ ದೋಷ ಎನ್ನಲಾಗಿದೆ.  ಬೆಳಗ್ಗೆ 10.5ಕ್ಕೆ ಬುದ್ಗಾಮ್​ನ ಗರೆಂಡ್​ ಕಲಾನ್​ ಗ್ರಾಮದಲ್ಲಿ ವಿಮಾನ ಪತನವಾಗಿದೆ. ವಿಮಾನ ಎರಡು ತುಂಡಾಗಿದ್ದು, ಬೆಂಕಿ ಹೊತ್ತಿಕೊಂಡಿದೆ. ಇಬ್ಬರು ಪೈಲಟ್​ಗಳ ದೇಹ ಅದೇ ಜಾಗದ ಸಮೀಪದಲ್ಲಿ ಪತ್ತೆಯಾಗಿದೆ. ಸಾವನ್ನಪ್ಪಿರುವ ಪೈಲೆಟ್​ಗಳು ಯಾರು ಎಂಬುದು ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 01-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?