ಹೊನ್ನಾವರ: ಕಳೆದ ಕೆಲವು ವರ್ಷಗಳಲ್ಲಿ ದೇಶದಾದ್ಯಂತ ವಿವಿಧ ಹಿಂದುತ್ವವಾದಿ ಸಂಘಟನೆಯ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆಯಾಗುವುದು, ಅವರನ್ನು ಹೆಕ್ಕಿಹೆಕ್ಕಿ, ಅಟ್ಟಾಡಿಸಿ ಕೊಲ್ಲುವುದು ಈ ರೀತಿಯ ಘಟನೆಗಳು ಸತತವಾಗಿ ನಡೆಯುತ್ತಿದೆ. ಈ ಪ್ರಕರಣಗಳ ವಿಚಾರಣೆಯನ್ನು ಮಾಡಲು ಸಂಬಂಧಪಟ್ಟ ರಾಜ್ಯ ಸರಕಾರ ವಿಫಲವಾಗಿದ್ದು, ಈ ಘಟನೆಯ ತನಿಖೆಯನ್ನು `ಕೇಂದ್ರೀಯ ತನಿಖಾ ದಳ’ಕ್ಕೆ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ಸೌ. ನವೀತಾ ಕಾಮತ ಇವರು ಆಗ್ರಹಿಸಿದ್ದಾರೆ,
ಮದರಸಾಗಳು ಹಾಗೂ ಭಯೋತ್ಪಾದನಾ ಮೂಲವಾಗಿರುವ ಸಂಘಟನೆಗಳ ನಡುವಿನ ಸಂಬಂಧದ ಬಗ್ಗೆ ಆಳವಾದ ತನಿಖೆ ನಡೆಸಬೇಕು ಹಾಗೂ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನೋಡಿ ಅದನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಶ್ರೀ ವಿನಾಯಕ ವಂದೂರಕರ, ಮಹೇಶ ಆಚಾರ್ಯ, ಎಮ್. ಡಿ. ನಾಯ್ಕ, ಜಿ.ಟಿ.ಭಟ್, ಗೀತಾ ವಂದೂರಕರ, ವಾಸಂತಿ ಮುರ್ಡೆಶ್ವರ, ಜಯಲಕ್ಮೀ ಕಲ್ಗಲ್ ಮುಂತಾದವರು ಉಪಸ್ಥಿತರಿದ್ದರು.