ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರದ ಮಹಾಬಲೇಶ್ವರ ದೇವಾಲಯದ ಮಹಾಶಿವರಾತ್ರಿ ಮಹೋತ್ಸವ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಇಂದಿನಿಂದ ಗಣೇಶ ಪೂಜೆ, ಧ್ವಜಾರೋಹಣ , ಮೃತಿಕಾಹರಣೋತ್ಸವ , ಭೂತಬಲಿ ಮುಂತಾದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಲಿದೆ.

  ಒಂಬತ್ತು ದಿನಗಳ ಕಾಲ ಇಲ್ಲಿನ ಮುಖ್ಯಕಡಲತೀರದಲ್ಲಿರು ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಹ ನಡೆಯಲಿದೆ. ಮಾ.9 ರಂದು ಶಿವಯೋಗ ಮಹಾಪರ್ವ(ಶಿವರಾತ್ರಿ) , ಮಾ.7ರಂದು ಮಹಾರಥೋತ್ಸವ ಜರುಗುಲಿದೆ.

 ದೇಶದ ವಿವಿಧ ರಾಜ್ಯಗಳಿಂದ ಬರುವ ಲಕ್ಷಂತಾರ ಸಂಖ್ಯೆಯ ಭಕ್ತರಿಗೆ ದರ್ಶನ, ಪೂಜೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಪಿಸಲಾಗಿದೆ. ಬಂದ ಭಕ್ತರಿಗೆ ಶುದ್ಧ ಕುಡೀಯುವ ನೀರು ಎರಡು ಹೊತ್ತು ಉಚಿತ ಭೋಜನ ವ್ಯವಸ್ಥೆ ಇಲ್ಲಿನ ಅಮೃತಾನ್ನ ವಿಭಾಗದಲ್ಲಿ ಮಾಡಲಾಗಿದೆ.

ಫೆ. 28 ರಂದು ಸಾಯಂಕಾಲ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ಟ ಹಾಸಣಗಿಯವರಿಂದ ಸಾಂಸ್ಕೃತಿಕ ಸಭಾ ಕಾರ್ಯಕ್ರಮ ಉದ್ಘಾಟನೆ ನಂತರ ಬಿಜ್ಜೂರು ವೆಂಕಟೇಶ ಗೌಡ ಹಾಗೂ ವೃಂದದಿಂದ ಗುಮಟೆಪಾಂಗ್ ನಂತರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ.

ಮಾ.1ರಂದು ಗೀತಾ ಸಂಸ್ಕೃತಿ ಗೋಕರ್ಣದವರಿಂದ ಕಿರುಮನೋರಂಜನಾ ಕಾರ್ಯಕ್ರಮ, ಭಕ್ತಿ ಗೀತೆ , ಜಿ.ಎಸ.ಬಿ. ಮಹಿಳಾ ಮಂಡಳದಿಂದ ಸಾಂಸ್ಕೃತಿಕ ಸಂಜೆ, ಮೈತ್ರೇಯಿ ನೃತ್ಯ ಕಲಾ ಟ್ರಸ್ಟನಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಮಾ.2ರಂದು ಬೆಂಗಳೂರಿನ ವಿದೂಷಿ ಸೌಮ್ಯ ಶರ್ಮಾ ತಂಡದರವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಮತ್ತು ದಾಸರ ವಾಣಿ , ಗೋಕರ್ಣಮೈತ್ರೇಯಿ ಮಹಿಳಾ ಮಂಡಳದಿಂದ ಸಾಂಸ್ಕೃತಿಕ ಸಂಜೆ, ಕಾರವಾರ ನಾಟ್ಯರಾಣಿ ನೃತ್ಯ ಕಲಾಕೇಂದ್ರದಿಂದ ಶಿವತಾಂಡವ ನೃತ್ಯ, ಕುಮಟಾ ಸ್ವರಾತ್ಮಕ ಮೆಲೋಡಿಸ್ ರವರಿಂದ ಸಂಗೀತ ರಸಸಂಜೆ ನಡೆಯಲಿದೆ.
ಮಾ.3ರಂದು ವೇಣುಗೋಪಾಲ ಹೆಗಡೆಯವರಿಂದ ಬಾನ್ಸುರಿ ವಾದನ ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಗೋಕರ್ಣದ ಕಲಾನಿಕೇತನ ಲಲಿತಾ ಕಲಾಕೇಂದವರಿಂದ ಭರತನಾಟ್ಯ, ಕೃಷ್ಣ ಭಂಡಾರಿ ಮಾರ್ಗದರ್ಶನದಲ್ಲಿ ಮಾ. ಅಭಿಷೇಕ ಅಡಿ ತಂಡದವರಿಂದ ” ಕಂಸದಿಗ್ವಿಜಯ” ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾ.4ರಂದು ಖರ್ವಾ ವಿಶ್ವೇಶ್ವರ ಭಟ್ಟರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭಕ್ತಿ ಸಂಗೀತ , ಬೆಂಗಳೂರು ಶ್ರೀಭಾರತಿ ನೃತ್ಯಾಲಯ ತಂಡದವರಿಂದ ಶಿವಾರ್ಪಣಂ,ಮತ್ತು ಬೆಳಗಾವಿ ಶಾಂತಲಾ ನಾಟ್ಯರಾಣಿ ಬಳಗದವರಿಂದ “ಚಿದಂಬರ ಮಹಾತ್ಮೆ “ಭರತನಾಟ್ಯರೂಪಕ ನಡೆಯಲಿದೆ.
ಮಾ. 5ರಂದು ಪಂ.ಎಲ್ ಆರ್. ವಿಜಯರಂಗ ಇವರಿಂದ ಹಿಂದೂಸ್ತಾನಿ ಸಂಗೀತ, ಮತ್ತು ದಾಸರವಾಣಿ ,ಹೊನ್ನಾವರ ನಾಟ್ಯಾಂಜಲಿ ನೃತ್ಯ ಕಲಾಕೇಂದ್ರದವರಿಂದ ನೃತ್ಯ ವೈಭವ,ಶ್ರೀನಿಕೇತನ ನೃತ್ಯ ಕಲಾಕೇಂದ್ರ ಹಾಗೂ ಭದ್ರಕಾಳಿ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಂಜೆ ನಡೆಯಲಿದೆ.
ಮಾ.6ರಂದು ಹೊನ್ನಾವರದ ಕಲಾವಿದ ಭರತ ಹೆಗಡೆಯವರಿಂದ ಸಿತಾರ ವಾದನ, ಶ್ರೀಧರ ಹೆಗಡೆ ಕಲಭಾಗರವರಿಂದ ಹಿಂದೂಸ್ತಾನಿ ಸಂಗೀತ ಮತ್ತು ಭಕ್ತಿ ಸಂಗೀತ, ಕುಂದಾಪುರದ ವೈಶಾಲಿ ಗುರುರಾಜರವರಿಂದ ಭಕ್ತಿ ಸಂಧ್ಯಾ, ಬೆಂಗಳೂರಿನ ವಿ. ನಾಗಭೂಷಣ ತಂಡದವರಿಂದ ಶಿವಕುಸುಮಾಂಜಲಿ ಭರತನಾಟ್ಯ ಸಮೂಹ ನೃತ್ಯ, ಶಿರಸಿ ನಾರಣದಾಸರವರಿಂದ ಶಿವಕಥೆ ನಡೆಯಲಿದೆ.

RELATED ARTICLES  ಗೋಕರ್ಣದಲ್ಲಿ ಯಾಮಪೂಜೆ ಸಂಪನ್ನ: ನಡೆಯಿತು ಧಾರ್ಮಿಕ ವಿಧಿ ವಿಧಾನ

ಮಾ. 7ರಂದು ಶಿರಸಿಯ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ ಇವರಿಂದ ತಬಲಾ ಸೋಲೋ, ಹೊಸನಗರ ಭಾರತೀ ಗುರುಕುಲದ ವಿದ್ಯಾರ್ಥಿಗಳು ಮತ್ತು ಭಾರತೀ ಯೋಗಧಾಮ ಮೈಸೂರುರವರಿಂದ ಯೋಗ ಪ್ರದರ್ಶನ, ಶಿರಸಿಯ ಸೌಮ್ಯ ಪ್ರದೀಪ ಹೆಗಡೆ ಹಾಗೂ ಅತಿಥಿ ಕಲಾವಿದರಿಂದ ಸುಂದೋಪಸುಂದ ಕಾಳಗ ಮಹಿಳೆಯರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

RELATED ARTICLES  ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಂಗಪೂಜೆ

ದೇವಾಲಯದ ಧಾರ್ಮಿಕ ಕಾರ್ಯಕ್ರಮ: ಫೆ.28ರಂದು ಗಣೇಶ ಪೂಜಾ ಧ್ವಜಾರೋಹಣ , ಮೃತಿಕಾಹರಣೋತ್ಸವ ಭೂತಬಲಿ, ಮಾ. 1ರಂದು ಸ್ಥಾನಶುದ್ಧ್ಯಾದಿಹವನಾನುಷ್ಠಾನ ಗಜವಾಹನಯಂತ್ರೋತ್ಸವ ಭೂತಬಲಿ, 2ರಂದು ಕಲಾಶಕ್ತ್ಯಾದಿಹವನ , ಹಂಸವಾಹನಯಂತ್ರೋತ್ಸವ ಪುಷ್ಪರಥೋತ್ಸವ ಭೂತಬಲಿ
3ರಂದು ಸಿಂಹವಾಹನಯಂತ್ರೋತ್ಸವ ಪುಷ್ಪರಥೋತ್ಸವ ಭೂತಬಲಿ, 4ರಂದು ಪುಷ್ಪರತೋತ್ಸವ ಶಿವಯೋಗದ ಮಹಾಪರ್ವಮಹಾಕುಂಭಾಭಿಷೇಕಪೂರ್ವಕ ಪಂಚಾಮೃತಾಭಿಷೇಕ ಭೂತಬಲಿ ಜಲಯಾನೋತ್ಸವ ದೀಪೋತ್ಸವ , ಮಾ5ರಂದು ಮಯೂರ ಯಂತ್ರೋತ್ಸವ ಪುಷ್ಪರಥೋತ್ಸವ ಭೂತಬಲಿ
ಮಾ6 ಪರಿವಾರಹವನ , ವೃಷಭವಾಹನ ಯಂತ್ರೋತ್ಸವ ಪುಷ್ಪರಥೋತ್ಸವ ,ಭೂತಬಲಿ, ಮಾ7ರಂದು ಶಾಂತಿಘಟಾದ್ಯಭಿಷೇಕ , ರಥ ಸಂಪ್ರೋಕ್ಷಿಣಿ ದಂಡಿಬಲಿ , ಭೂತಬಲಿ ಶ್ರೀಮನ್ಮಹಾರಥೋತ್ಸವ , ಮೃಗಯಾತ್ರೆ, ಗ್ರಾಮಬಲಿ, ಮಾ. 8ರಂದು ಚೂರ್ಣೋತ್ಸವ , ಅವಭೃಥ, ಜಲಾಯನೋತ್ಸವ , ಮಹಾಪೂರ್ಣಾವತಿ ಅಂಕುರಾರ್ಪಣೆ ದೀಪೋತ್ಸವ ಅಂಕುರ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಾಲಯದ ಆಡಳಿತಾಧಿಕಾರಿಗಳಾದ ಜಿ.ಕೆ‌ ಹೆಗಡೆ ಮಾಹಿತಿ ನೀಡಿದ್ದಾರೆ.