ಯಲ್ಲಾಪುರ: ಹೆಗ್ಗಾರಿನ ಪುನರ್ವಸತಿ ಕೇಂದ್ರದ ಮಹಾಗಣಪತಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಪ್ರತಿ ವರ್ಷದಂತೆ ಈ ವರುಷವೂ ಶ್ರಾವಣ ಮಾಸದಲ್ಲಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಆಗಸ್ಕ್, 8 ರಂದು ರಾತ್ರಿ 9 ಘಂಟೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಇದಕ್ಕೂ ಮುನ್ನ ಪ್ರತಿಭಾ ಪುರಸ್ಕಾರ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ

ಜಿಲ್ಲಾ ಪೋಲೀಸ್ ಉಪಾಧೀಕ್ಷಕರಾದ ಎನ್ ಟಿ ಪ್ರಮೋದರಾವ್ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯತ ಸದಸ್ಯ ಜಗದೀಶ ನಾಯಕ, ಡೋಂಗ್ರಿ ಗ್ರಾಮ ಪಂಚಾಯತ ಅಧ್ಯಕ್ಷ ಗೋಪಣ್ಣ ವೈದ್ಯ, ಉದ್ಯಮಿ ಮಂಗಲದಾಸ ಕಾಮತ್, ಭಾರತೀಯ ಕಿಸಾನ್ ಸಂಘದ ಶಿವರಾಂ ಗಾಂವ್ಕರ್, ಅಂಕೋಲಾ ಯುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾರ್ತೀಕ ನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಪ್ರಭಾಕರ ಕಲಗಾರೆ ಅಧ್ಯಕ್ಷತೆ ವಹಿಸಲಿದ್ದಾರೆ.

RELATED ARTICLES  ಉತ್ತರಕನ್ನಡದ ಹಲವೆಡೆ ಮಳೆ : ಸಿಡಿಲು ಬಡಿದು 17 ಮೇಕೆ ಸಾವು

ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸತೀಶ್ ಭಟ್ಟ ಹೆಗ್ಗಾರ ಹಾಗೂ ಚಂಡೆ ವಾದನದಲ್ಲಿ ರಾಜ್ಯಮಟ್ಟದಲ್ಲಿ ಬೆಳಕಿಗೆ ಬಂದಿರುವ ಗಣೇಶ ಗಾಂವ್ಕರ ಕನಕನಹಳ್ಳಿ ಇವರನ್ನು ಪುರಸ್ಕರಿಸಲಾಗುವುದು.

RELATED ARTICLES  ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.

ನಂತರ ಯಕ್ಷಗಾನ ಸತ್ಯವಾನ್ – ಸಾವಿತ್ರಿ ಪ್ರದರ್ಶನಗೊಳ್ಳಲಿದೆ.

(ಸಾಂದರ್ಭಿಕ ಚಿತ್ರ ಬಳಸಲಾಗಿದೆ.)