ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಇಂದು – ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶ್ರೀ ಅಭಿನಂದನ್ ಇವರು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಬರುವಂತೆ ಪ್ರಾರ್ಥಿಸಿ ಶ್ರೀ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು .
ಭಾರತೀಯ ಭೂಸೇನೆಯ ಕ್ಯಾ . ಗಿರೀಶ್ ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು , ಪ್ರಾರ್ಥಿಸಿಕೊಂಡು ಪೂಜೆ ಸಲ್ಲಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಪ್ರಸಾದ ನೀಡಿ ಗೌರವಿಸಿದರು.