ಕಾರವಾರ: ತಾಲೂಕಿನ ಆಮದಳ್ಳಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಅಡಗಿಸಿಡಲಾಗಿದ್ದ ಸರಿ ಸುಮಾರು 4 ಲಕ್ಷಕ್ಕೂ ಅಧಿಕ ಮೌಲ್ಯದ 2440 ಲೀಟರ್ ಗೋವಾ ಮದ್ಯವನ್ನು ವಶಕ್ಕೆ ಪಡೆದ ಘಟನೆ ಇದೀಗ ವರದಿಯಾಗಿದೆ.

RELATED ARTICLES  ಬಡವರನ್ನು ಸೇರಬೇಕಿದ್ದ ಅಕ್ಕಿ ಅಕ್ರಮ ಸಾಗಾಟ ಪತ್ತೆಹಚ್ಚಿದ ಪೊಲೀಸರು.

ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 2440 ಲೀಟರ್ ಗೋವಾ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಅಬಕಾರಿ ಜಿಲ್ಲಾ ಆಯುಕ್ತ ಮಂಜುನಾಥ್ ನೇತ್ರತ್ವದಲ್ಲಿ ಪೋಲೀಸರೂ ಸೇರಿ ದಾಳಿ ನಡೆಸಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ಕುಮಟಾದಲ್ಲಿ ಸಿಡಿಲುಬಡಿದು ಯುವತಿ ಬಲಿ

ಕಾರ್ಯಾಚರಣೆ ವೇಳೆ ಆರೋಪಿಗಳು ಪರಾರಿಯಾಗಿದ್ದು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣ ದಾಖಲಾಗಿದೆ.