ಹೊನ್ನಾವರ: ತಾಲೂಕಿನ ಖರ್ವಾ ಕೊಳಗದ್ದೆಯಲ್ಲಿ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆ ಖರ್ವಾ ಕೊಳಗದ್ದೆ ಇವರ ಆಶ್ರಯದಲ್ಲಿ 16ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ ಕೊಳಗದ್ದೆಯ ಸಿದ್ದಿವಿನಾಯಕ ಪ್ರೌಢಶಾಲೆಯ ಆವಾರದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಖರ್ವಾ ಗ್ರಾ.ಪಂ ಅಧ್ಯಕ್ಷ ಮಾಬ್ಲ ನಾಯ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ತಂದೆ ತಾಯಂದಿರು ತಮ್ಮ ತಮ್ಮ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಒದಗಿಸಿಕೊಡಬೇಕು. ಅವರಲ್ಲಿರುವ ಪ್ರತಿಭೆ ಹೊರಬರಲು ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದರು. ಕಳೆದ 16 ವರ್ಷಗಳಿಂದ ಯಶಸ್ವಿನಿ ಸಂಘ ಸಾಂಸ್ಕ್ರತಿಕ ಕಾರ್ಯಕ್ರಮಗಳ ಆಯೋಜಿಸಿ ಸಾಧಕರನ್ನು ಸನ್ಮಾನಿಸುತ್ತಿದೆ. ಸಂಘದ ಕಾರ್ಯಚಟುಚಟಿಕೆ ಇದೇ ರೀತಿ ಮುಂದುವರೆದು ಸಂಘದಲ್ಲಿ ಒಗ್ಗಟ್ಟು ಮೂಡಲಿ, ಯಶಸ್ವಿನಿ ಸಂಘ ಯಶಸ್ವಿಯಾಗಿ ಮುನ್ನುಗಲಿ ಎಂದು ಶುಭ ಹಾರೈಸಿದರು.
ಇದೇ ಸಂಧರ್ಬದಲ್ಲಿ ಊರಿನ ರೈತಾಪಿ ಹಿರಿಯ ನಾಗರಿಕ ಪಾಂಡುರಂಗ ಕೇಶವ ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ರಾಷ್ಟ್ರಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸದ ಯೋಗಪಟು ಪ್ರಜ್ವಲ್ ಮಂಜುನಾಥ ನಾಯ್ಕ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಕೊಳಗದ್ದೆ ಸಿದ್ದಿವಿನಾಯಕ ಪ್ರೌಢಶಾಲೆಯ ದೈಹಿಕ ಶಿಕ್ಷಕ ಆರ.ಎಸ್ ನಾಯ್ಕ ಮಾತನಾಡಿ, ಎಲ್ಲಿಒಯವರೆಗೆ ಸದೃಡ ಸಮಾಜ ನಿರ್ಮಾಣವಾಗುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗುವುದು ಕಷ್ಟಸಾಧ್ಯ. ಸಮಾಜ ಒಂದು ಶಕ್ತಿಯಾಗಿದೆ ಅಲ್ಲಿಂದ ಪ್ರತಿಭೆ ಎಂಬ ಹೂವುಗಳು ಅರಳುತ್ತದೆ. ಅಂದು ಬ್ರಿಟಿಷ್‍ರಿಂದಲು ಒಡೆಯಲಾಗದ ಸಮಾಜ ಮೊಬೈಲ್ ಎಂಬ ವೈರಸ್‍ನಿಂದ ಛಿದ್ರಛಿದ್ರವಾಗುತ್ತಿದೆ.ಅದರಲ್ಲು ಯುವ ಸಮೂಹ ಮೊಬೈಲ್ ದಾಸರಾಗುತ್ತಿದ್ದಾರೆ ತಂದೆತಾಯಂದಿರು ಅಸಹಾಯಕರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಸಾಂಸ್ಕ್ರತಿಕ ವೇದಿಕೆಯ ಅಧ್ಯಕ್ಷ ಟಿ.ಎಚ್ ಗೌಡ ಮಾತನಾಡಿ ಅಳಿಯುತ್ತಿರುವ ಪುರಾತನ ಸಂಸ್ಕ್ರತಿಯನ್ನು ಉಳಿಸಬೇಕು ಎನ್ನುವ ದ್ರಷ್ಟಿಯಿಂದ ನಮ್ಮ ಸಂಘ ಅಳಿಲು ಸೇವೆ ಸಲ್ಲಿಸುತ್ತಿದೆ. ಅದೇ ರಿತಿ ಉರನಾಗರಿಕರ ಸಹಕಾರವು ಹೆಚ್ಚಿದೆ ಇದೇ ರೀತಿ ಮುಂದಿನ ದಿನಗಳಲ್ಲು ಸಹಕರಿಸಿ ಎಂದು ಕೋರಿದರು.
ಮೋಹನ್ ನಾಯ್ಕ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ಹೆಗಡೆ ಹಡಿನಬಾಳ, ಸಿದ್ದಿವಿನಾಯಕ ದೇವಾಲಯದ ಮೋಕ್ತೆಸರರಾದ ಮುಕುಂದ ಶ್ಯಾನಭಾಗ, ಯಶಸ್ವಿನ ಸಾಂಸ್ಕ್ರತಿಕ ವೇದಿಕೆಯ ನಿರ್ದೇಶಕ ಗಜಾನನ ನಾಯ್ಕ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಯಶಸ್ವಿನ ಸಾಂಸ್ಕ್ರತಿಕ ವೇದಿಕೆ ಕಲಾವಿದರಿಂದ ಹಾಗೂ ಅತಿಥಿ ಕಲಾವಿದರಿಂದ “ಪಾಪಿ ತಂದೆಗೆ ಪಣ್ಯದ ಮಗಳು”ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಂಡಿತು. ಡಿ.ಬಿ ಮೂರಾರಿ ಕಾರ್ಯಕ್ರಮ ನಿರೂಪಿಸಿದರು.ಅಶೋಕ್ ರಾಥೋಡ್ ವಂದಿಸಿದರು.