ಗೋಕರ್ಣ: ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿದಿನಾಂಕ ೨೮-೦೨-೨೦೧೯ ರಿಂದ ೦೭-೦೩-೨೦೧೯ ವರೆಗೆ ಪ್ರತಿದಿನ ಸಾಯಂಕಾಲ ಸಮುದ್ರತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಪಂಡಿತ ಗಣಪತಿ ಭಟ್ ಹಾಸಣಗಿ ಇವರು . ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನೆರವೇರಿಸಿದರು .
ಈ ಸಂದರ್ಭದಲ್ಲಿ ಶಿವರಾತ್ರಿ ಸಮಿತಿಯ ಅಧ್ಯಕ್ಷ ಡಾ ವಿ ಆರ್ ಮಲ್ಲನ್, ಸದಸ್ಯರಾದ ಶ್ರೀ ಮಹೇಶ ಶೆಟ್ಟಿ, ಶ್ರೀ ನಾಗರಾಜ ನಾಯ್ಕ ಹಿತ್ತಲಮಕ್ಕಿ, ಶ್ರೀ ಬೀರಣ್ಣ ನಾಯಕ ಅಡಿಗೋಣ, ಶ್ರೀ ಶಂಭು ಭಟ್ ಕಡತೋಕ, ಶ್ರೀ ಜಯರಾಮ ಹೆಗಡೆ, ಶ್ರೀ ಸತೀಶ ಭಟ್ , ಶ್ರೀಮತಿ ಸುಮನಾ ಗೌಡ, ಶ್ರೀಮತಿ ಶೀಲಾ ಹೊಸ್ಮನೆ ಉಪಸ್ಥಿತರಿದ್ದರು .