ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರು ಇಂದು ರಾತ್ರಿ 9 ಗಂಟೆ 21 ನಿಮಿಷಕ್ಕೆ  ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿದ್ದಾರೆ.  
 
ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಸುರಕ್ಷಿತವಾಗಿ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.
ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.
 
ಐಎಎಫ್ ಅಧಿಕಾರಿಗಳು ಸೇರಿ ಅನೇಕ ದೇಶಾಭಿಮಾನಿಗಳು ದೇಶದ ಹೆಮ್ಮೆಯ ಪುತ್ರ ಅಭಿನಂದನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ಬಳಿಕ ಅವರನ್ನು ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ನಂತರ ಐಎಫ್ಎಫ್  ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದುಬಂದಿದೆ.
 
  ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಬರೊಬ್ಬರಿ 4 ಗಂಟೆ ವಿಳಂಬವಾಗಿದ್ದು, ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿದೆ ಎನ್ನಲಾಗಿದೆ.
 
ನಿಜವಾದ ಹೀರೋ ಅಭಿನಂದನ್ ಅವರು ಸುರಕ್ಷಿತವಾಗಿ ಮರಳಿ ಬಂದಿದ್ದಕ್ಕೆ ಇಡೀ ದೇಶವೇ ಸಂಭ್ರಮಿಸುತ್ತಿದೆ .
RELATED ARTICLES  ಬಿಜೆಪಿ ಸದಸ್ಯರಿಗೆ ನೈತಿಕತೆ ಇದ್ದರೆ ಕಾಗೇರಿಯವರ ಕಚೇರಿ ಎದುರು ಪ್ರತಿಭಟನೆ ನಡೆಸಬೇಕು: ಶ್ರೀಕಾಂತ ತಾರಿಬಾಗಿಲ