ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ವತಿಯಿಂದ ದಿನಾಂಕ 08-03-2019 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 3.30 ಗಂಟೆಗಳ ವರೆಗೆ ಶಿವಾಜಿ ಪದವಿ ಕಾಲೇಜು, ಬಾಡ ಕಾರವಾರದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಎಸ್.ಐ.ಎಸ್ ಬೆಂಗಳೂರು, ಸ್ಫೂರ್ತಿ ಹರ್ಬಲ್ಸ್ ಹುಬ್ಬಳ್ಳಿ, ಮೂಥಟ್ ಪೈನಾನ್ಸ ಗೋವಾ, ಆರ್ಟಿಸ್ ಮೆನ್ಯುಫೆಕ್ಚರ ಗೋವಾ, ಸೋಡೆಕ್ಸೊ ಬೆಂಗಳೂರು, ಎನ್.ಟಿ.ಟಿ.ಎಪ್ ಬೆಂಗಳೂರು ಹಾಗೂ ಮಹೀಂದ್ರ ಬ್ಯಾಂಕ್ ಬೆಂಗಳೂರು ಸೇರಿದಂತೆ 25 ಕ್ಕೂ ಹೆಚ್ಚು ಖಾಸಗಿ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿವೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಈ ಕಚೇರಿಯನ್ನುಖುದ್ದಾಗಿಅಥವಾದೂರವಾಣಿ ಸಂಖ್ಯೆ 9481403800, 9481274298 ಸಂಪರ್ಕಿಸಲು ಉದ್ಯೋಗಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.