ಹಂಪಿ:ಇಂದು ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ತೊರೆಯಲಿದೆ. ಎರಡು ದಿನಗಳ ಕಾಲ ನಡೆಯಲಿರುವ ಹಂಪಿ ಉತ್ಸವವನ್ನು ಇಂದು ಸಂಜೆ ಆರು ಗಂಟೆಗೆ ಸಿಎಂ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಮುಂಭಾಗದ ಬಸವಣ್ಣ ಬಳಿ ಪ್ರಮುಖ ವೇದಿಕೆಯ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಸಾ.ರಾ.ಮಹೇಶ್, ತುಕಾರಾಂ, ಪರಮೇಶ್ವರ್ ನಾಯಕ್ ಹಾಗೂ ಸ್ಥಳೀಯ ಶಾಸಕರು, ಸಂಸದರು ಆಗಮಿಸಲಿದ್ದಾರೆ.
ಹಂಪಿ ಉತ್ಸವದಲ್ಲಿ ಒಟ್ಟು ನಾಲ್ಕು ವೇದಿಕೆ ನಿರ್ಮಿಸಿದ್ದು,ರೈತ ವಿಚಾರ ಸಂಕಿರಣ, ಮಹಿಳಾ, ಮಕ್ಕಳ ಉತ್ಸವ, ಕವಿಗೋಷ್ಟಿಗಳು ನಡೆಯಲಿವೆ. ಉತ್ಸವದ ಮೆರಗು ಹೆಚ್ಚಿಸಲು ಪ್ರಾಣೇಶ್, ಪ್ರೊ. ಕೃಷ್ಣೇಗೌಡರ ಹಾಸ್ಯ ರಸದೌತಣ ಕೂಡ ನಡೆಯಲಿದೆ. ಗಾಯಕ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಗಾನಸುಧೆಯೂ ಕೂಡ ಇರಲಿದೆ. ಈ ವರ್ಷ ಎಂದಿಗಿಂತ ಒಂದು ದಿನ ಕಡಿಮೆ ಉತ್ಸವ ನಡೆಯಲಿದೆ ಎಂದು ವರದಿಯಾಗಿದೆ.