ಇದೇ ಮಾರ್ಚ ೫ ರಂದು ಕಲಬುರಗಿ ಜಿಲ್ಲೆಯ. ಅಫಜಲಪುರ ತಾಲೂಕಿನ ಗುರುಕುಲ ವಿದ್ಯಾಪೀಠದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಾವಕವಿ ಎಂದೆ ಪರಿಚಿತರಾದ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಗುಲ್ಬರ್ಗಾ ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಒಂದಾದ ಅಫಜಲಪುರ ತಾಲೂಕಿನ ಗುರುಕುಲ ವಿದ್ಯಾಪೀಠ ಅಧ್ಯಕ್ಷರಾದ ಅಪ್ಪಾರಾವ ಹೆಗ್ಗಿಯವರು ಮಾಧ್ಯಮ ಮುಖೇನ ಮುಂಡಳ್ಳಿಯವರ ನಿನಾದ ಸಂಘಟನೆ ಮತ್ತು ಅವರ ಸಾಹಿತ್ಯ ಸೇವೆಯನ್ನು ತಿಳಿದು ಈ ನಿರ್ಧಾರ ತೆಗೆದುಕೊಂಡು ಅಧಿಕೃತ ಆಹ್ವಾನ ನೀಡಿರುತ್ತಾರೆ.
ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಅಫಜಲಪುರ ಶಾಸಕ ಎಂ.ವಾಯ್.ಪಾಟಿಲ್ ಉದ್ಘಾಟಿಸಲಿದ್ದು, ಸಂಸ್ಥೆಯ ಅಧ್ಯಕ್ಷರಾದ ಅಪ್ಪಾರಾವ್ ಹೆಗ್ಗಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉಮೇಶ ಮುಂಡಳ್ಳಿ ಅವರ ಜೊತೆಗೆ ಗುಲ್ಬರ್ಗ ಆಕಾಶವಾಣಿಯ ಲಕ್ಷ್ಮೀಕಾಂತ ಪಾಟಿಲ್, ರಾಜು ಪಾಟೀಲ್, ಸುಭಾಶ್ ಚಂದ್ರ ದೊಡಮನಿ, ಚಂದು ದೇಸಾಯಿ, ಮತೀಲ್ ಪಟೇಲ್ ಮೊದಲಾದ ಗಣ್ಯರು ಅತಿಥಿ ಗಳಾಗಿ ಉಪಸ್ಥಿತರಿರುವರು ಎಂದು ತಿಳಿಸಲಾಗಿದೆ.