ಶಿರಸಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಜನತೆಗೆ ಮುಟ್ಟಿಸಲು ರಾಜ್ಯಾದ್ಯಂತ ಬಿಜೆಪಿ ವತಿಯಿಂದ ಮೋದಿ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ. ಅದರಂತೆ ಶಿರಸಿಯಲ್ಲಿ
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಗರದಲ್ಲಿ ಬಿಜೆಪಿ ತಾಲೂಕಾ ಯುವ ಮೋರ್ಚಾ ವತಿಯಿಂದ ಬೈಕ್ ರ‍್ಯಾಲಿ ನಡೆಯಿತು.
ಇಲ್ಲಿನ ಪ್ರಸಿದ್ಧ ಮಾರಿಕಾಂಬಾ ದೇವಾಲಯದಿಂದ ನೂರಾರು ಯುವಕರು, ಬಿಜೆಪಿ ಪದಾಧಿಕಾರಿಗಳು, ಪ್ರಮುಖರು ಪ್ರಾರಂಭವಾಗಿ ನಗರದ ದೇವಿಕೆರೆ, ರಾಘವೇಂದ್ರ ಸರ್ಕಲ್, ಹೊಸಪೇಟೆ ರಸ್ತೆ, ಅಶ್ವಿನಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ರ‍್ಯಾಲಿ ನಡೆಸಿ, ಗ್ರಾಮೀಣ ಪ್ರದೇಶವಾದ ಚಿಪಗಿಗೂ ಭೇಟಿ ನೀಡಿ ಎಲ್ಲರಿಗೂ ಕಮಲ ಸಂದೇಶವನ್ನು ನೀಡಿದರು
ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ರ್ಯಾಲಿಯಲ್ಲಿ ಪ್ರಧಾನಿ ಪರ ಘೋಷಣೆ ಕೂಗಲಾಯಿತು.