ಕುಮಟಾ : ಕುಮಟಾ ಬಿಜೆಪಿ ಮಂಡಳದ ಯುವಮೋರ್ಚಾದಿಂದ ಸಂಘಟಸಿದ್ದ ವಿಜಯ ಸಂಕಲ್ಪ ಬೈಕ್ ರ್ಯಾಲಿ ಯಲ್ಲಿ 500 ಕ್ಕೂ ಹೆಚ್ಚಿನ ಕಾರ್ಯಕರ್ತರು ಕುಮಟಾ ನಗರದಾದ್ಯಂತ ಮೋದಿ ಪರ ಘೋಷಣೆ ಕೂಗುತ್ತಾ ಉತ್ಸಾಹದಿಂದ ರ್ಯಾಲಿ ನಡೆಸಿದರು.
ಶಾಸಕ ದಿನಕರ ಶೆಟ್ಟಿ ರ್ಯಾಲಿ ಗೆ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ ನಮ್ಮ ದೇಶದ ಪ್ರಧಾನಿ ಸನ್ಮಾನ್ಯ ನರೇಂದ್ರ ಮೋದಿ ಜೀ ರವರು ಐದು ವರ್ಷಗಳಲ್ಲಿ ಸಾಕಷ್ಟು ಯೋಜನೆಗಳನ್ನು ದೇಶದ ಜನತೆಗೆ ನೀಡಿದ್ದಾರೆ. ದೇಶದ ಭದ್ರತೆ ಅಭಿವೃದ್ಧಿ ಗೆ ಪೂರಕವಾದ ಅನೇಕ ಮಾರ್ಪಾಡು ಗಳನ್ನು ಮಾಡಿ ವಿಶ್ವದಾದ್ಯಂತ ಗಮನ ಸೆಳೆದಿದ್ದಾರೆ.ಜೊತೆಗೆ ಬಲಾಡ್ಯ ರಾಷ್ಟ್ರ ಗಳು ನಮ್ಮ ದೇಶದ ಪರವಾಗಿ ನಿಲ್ಲುವಂತೆ ಮಾಡಿ ನಮ್ಮ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೋಯ್ದಿದ್ದಾರೆ. ಇಂಥಹ ಪ್ರಧಾನಿ ನಮಗೆಲ್ಲ ಹೆಮ್ಮೆ. ಆದ್ದರಿಂದ ಬರುವ ಚುನಾವಣೆಯಲ್ಲಿ ಅವರ ಸಾಧನೆಗಳನ್ನು ಜನರಿಗೆ ತಿಳಿಸಿ ನಾವೆಲ್ಲ ಸೇರಿ ಮೋದಿಯವರನ್ನು ಮತ್ತೊಮ್ಮೆ ಈ ದೇಶದ ಪ್ರಧಾನಿಯನ್ನಾಗಿ ಮಾಡಬೇಕಿದೆ ಆದ್ದರಿಂದ ಚುನಾವಣೆ ಹೊಸ್ತಿಲಲ್ಲಿ ವಿಜಯ ದ ಗುರಿ ಮುಟ್ಟಲು ಈ ವಿಜಯ ಸಂಕಲ್ಪ ಬೈಕ್ ರ್ಯಾಲಿ ಯನ್ನು ನಮ್ಮ ಕುಮಟಾ ನಗರದಾದ್ಯಂತ ಹಮ್ಮಿಕೊಂಡಿದ್ದೇವೆ ಎಂದರು.
ಚುನಾವಣಾ ಸಂಚಾಲಕ ವಿನೋದ ಪ್ರಭು, ಮಂಡಳ ಅಧ್ಯಕ್ಷ ಕುಮಾರ ಮಾರ್ಕಾಂಡೆ, ಎಮ್ ಜಿ ಭಟ್ಟ, ಜಗದೀಶ ಬಲ್ಲಾಳ, ಹೇಮಂತ್ ಗಾಂವಕರ್, ಯುವಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ ಹಾಗೂ ಅನೇಕ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿ ಹಳ್ಳಿಗಳಿಂದ ಬಂದ ಕಾರ್ಯಕರ್ತರು ಭಾಗವಹಿಸಿದ್ದರು…