ಹೊನ್ನಾವರ: ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ಅತ್ಯುತ್ತಮ ರೀತಿಯಲ್ಲಿ ಸಕ್ರಿಯವಾಗಿ ಹಂತ ಹಂತವಾಗಿ ಗುರುತಿಸಿಕೊಳ್ಳುತ್ತಿರುವ ಯುವ ಮುಖಂಡ ಹಾಗೂ ಉತ್ಸಾಹಿ ತರುಣ ಕವಲಕ್ಕಿಯ ರವಿ ಶೆಟ್ಟಿಯವರಿಗೆ ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಪಟ್ಟ ಒಲಿದು ಬಂದಿದೆ .
ಜಿಲ್ಲೆಯ ಕಾಂಗ್ರೆಸ್ ಪಾಳೆಯದಲ್ಲಿ ತಮ್ಮ ಸಕ್ರಿಯ ರಾಜಕಾರಣ ಹಾಗೂ ವೈವಿಧ್ಯಮಯ ಚಿಂತನೆಗಳಿಂದ ಸಹೃದಯವಾಗಿ ಗುರುತಿಸಿಕೊಂಡವರು ಕವಲಕ್ಕಿಯ ರವಿ .ಕೆ ಶೆಟ್ಟಿ ಅವರು . ಉದ್ಯಮ ಕ್ಷೇತ್ರ ಹಾಗೂ ರಾಜಕೀಯ ಈ ಎರಡು ಕ್ಷೇತ್ರಗಳಲ್ಲಿಯೂ ಸಮನ್ವಯತೆಯನ್ನು ಕಂಡುಕೊಂಡು ಅತ್ಯುತ್ತಮ ರೀತಿಯಲ್ಲಿ ಸಮಾಜಮುಖಿ ಚಿಂತನೆಗಳಿಂದ ಗುರುತಿಸಿ ಕೊಳ್ಳುತ್ತಿರುವವರು.
ತನ್ನದೇ ಆದ ಯುವ ಪಡೆ ಹಾಗೂ ಸಹೃದಯಿ ಮನೋ ಧೋರಣೆಯಿಂದ ಎಲ್ಲರ ಮನಗೆದ್ದು ಉದ್ಯಮದ ಜೊತೆಗೆ ರಾಜಕೀಯದಲ್ಲಿಯೂ ಆಕರ್ಷಕ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬೆಳೆಯುತ್ತಿದ್ದಾರೆ ರವಿ ಶೆಟ್ಟಿ ಕವಲಕ್ಕಿ ಅವರು .
ಅನೇಕ ಅಭಿಮಾನಿಗಳ ಜೊತೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ನಂತರ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ತದನಂತರದಲ್ಲಿ ಇದೀಗ ಅವರ ಕಾರ್ಯಕ್ಷಮತೆ ಹಾಗೂ ಅವರ ವ್ಯಕ್ತಿತ್ವವನ್ನು ನೋಡಿದಂತಹ ಪಕ್ಷ ಅವರನ್ನು “ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ” ನೇಮಕ ಮಾಡಿ ಅವರಿಗೆ ಗುರುತರ ಜವಾಬ್ದಾರಿಯನ್ನು ನೀಡಿದೆ .
ಪಕ್ಷ ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸುವ ಹಾಗೂ ಪಕ್ಷ ಸಂಘಟನೆ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ರವಿ .ಕೆ. ಶೆಟ್ಟಿ ಅವರು ಉತ್ಸುಕರಾಗಿದ್ದಾರೆ. ಅವರಿಗೆ ಎಲ್ಲೆಡೆಗಳಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ .