ಭಟ್ಕಳ ಎಜ್ಯುಕೇಶನ್ ಟ್ರಸ್ನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನ್ಯೂ ಇಂಗ್ಲೀಷ್ ಸ್ಕೂಲ್ ನ ಶಿಕ್ಷಕ ಗಣಪತಿ ಶಿರೂರ ಮಾತನಾಡಿ ವಿಜ್ಞಾನ ನಮ್ಮಲ್ಲಿ ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ವೈಜ್ಞಾನಿಕ ಮನೋಭಾವವೆಂದಂರೆ ಪ್ರಶ್ನಿಸುವ ಮೂಲಕ ಬದುಕಿಗೆ ಸಂಬಂಧಿಸಿದ ಪ್ರತಿಯೊಂದು ಸಂಗತಿಗಳ ಹಿಂದಿನ ತತ್ವಗಳನ್ನು ಅರಿಯುವುದು ಎಂದರ್ಥ. ಸಿ.ವಿ.ರಾಮನ್ ಅವರ ಜನ್ಮ ದಿನವನ್ನು ವಿಜ್ಞಾನ ದಿನವನ್ನಾಗಿ ಆಚರಿಸಿ ನಮ್ಮ ವಿದ್ಯಾರ್ಥೀಗಳಲ್ಲೂ ಚಿಂತನಶೀಲತೆಯನ್ನು ಬೆಳೆಸಿ ಈ ನಾಡಿಗೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಿ ರೂಪಿಸುವ ಗುರುತರ ಹೊಣೆ ಭಾವಿ ಶಿಕ್ಷಕರ ಮೇಲಿದೆ ಎಂದರು .

RELATED ARTICLES  ಆಲ್ಟೋ ಕಾರು ಹಾಗೂ ಟಿಪ್ಪರ್ ನಡುವೆ ಡಿಕ್ಕಿ : ದಂಪತಿ ಸಾವು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಆರ್.ನರಸಿಂಹ ಮೂರ್ತಿ ಮಾತನಾಡಿ. ಶಿಕ್ಷಕ ಎಲ್ಲ ವಿಷಯಗಳ ಮೂಲಭೂತ ಜ್ಞಾನವನ್ನ ಹೊಂದಿರಬೇಕಲ್ಲದೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಾಮಾಣೀಕ ಪ್ರಯತ್ನ ನಡೆಸಬೇಕು. ಶಿಕ್ಷಕನಾದವನಿಗೆ ವೈಜ್ಞಾನಿಕ ಮನೋಭಾವವಿದ್ದಾಗ ಮಾತ್ರ ಮಕ್ಕಳಲ್ಲಿ ಬೆಳೆಸಲು ಸಾಧ್ಯ. ಅಂತೆಯೇ ಭಾವಿಶಿಕ್ಷಕರಾಗುವ ಪ್ರಶಿಕ್ಷಕರು ಹೆಚ್ಚು ಹೆಚ್ಚು ಓದುವ ಮೂಲಕ ಜ್ಞಾನವಂತರಾಗಿ ಉತ್ತಮ ಭವಿಷ್ಯ ನಿರ್ಮಾಣಮಾಡುವ ಮಕ್ಕಳನ್ನು ತಯಾರು ಮಾಡಬೇಕಿದೆ ಎಂದು ನುಡಿದರು. ವಿಜ್ಞಾನ ಸಂಘದ ಕಾಯಾಧ್ಯಕ್ಷರದ ಸುಧಾ ಎಚ್.ಜೆ. ಪ್ರಾಸ್ಥಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು.

RELATED ARTICLES  ಮಾಜಿ ಮುಖ್ಯಮಂತ್ರಿ ಡಾ|| ವೀರಪ್ಪ ಮೊಯ್ಲಿ ಅವರಿಗೆ ಭಟ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಅವರಿಂದ ಸನ್ಮಾನ

ಸಭಾ ಕಾರ್ಯಕ್ರಮಕ್ಕೂ ಮುನ್ನ ಪ್ರಶಿಕ್ಷಣಾರ್ಥಿ ಭಾಗ್ಯಶ್ರೀ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಹಿನ್ನೆಲೆ ಹಾಗೂ ಸಿ.ವಿ.ರಾಮನ್ ಅವರ ಕುರಿತು ಪವರ್ ಪಾಯಿಂಟ್ ಮೂಲಕ ಮಾಹಿತಿ ಪ್ರಸ್ತುತಪಡಿಸಿದರು. ವಿಜ್ಞಾನ ಸಂಘದ ಕಾರ್ಯಾದ್ಯಕ್ಷೆ ಉಪನ್ಯಾಸಕಿ ಸುಧಾ ಎಚ್.ಜೆ. ಎಲ್ಲರನ್ನು ಸ್ವಾಗತಿಸಿ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಪ್ರಶಿಕ್ಷಣಾರ್ಥಿ ಚಂದ್ರಿಕಾ ಮೊಗೇರ ಎಲ್ಲರನ್ನು ಸ್ವಾಗತಿಸಿದರೆ ಹರ್ಷಿತಾ ನಾಯ್ಕ ಹಾಗೂ ಸಿಂಧು ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ನಾಗಶ್ರೀ ಸಂಗಡಿಗರು ಪ್ರಾರ್ಥಿಸಿದರು. ಸಾಯಿಗೀತಾ ವಂದಿಸಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘದ ಸಹ ಕಾರ್ಯಾಧ್ಯಕ್ಷೆ ರಶ್ಮೀ ಏ.ಆರ್ ಹಾಗೂ ಉಪನ್ಯಾಸಕ ವ್ರಂದದವರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.