ಶಿರಸಿ : ಸಹಕಾರಿ ಕ್ಷೇತ್ರದಲ್ಲಿ ಸದಸ್ಯರ ಹಿತದೃಷ್ಠಿಯಿಂದ ವಿನೂತನ ಸೇವೆ ಸೌಲಭ್ಯಗಳನ್ನು ಒದಗಿಸುತ್ತ ಬಂದಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.,ಶಿರಸಿ(ಉ.ಕ.) ಇದೀಗ ಟಿ.ಎಸ್.ಎಸ್. “ರಾಕ್ ಪಾಸ್ಪೇಟ್” ಎಂಬ ರಾಸಾಯನಿಕ ಗೊಬ್ಬರವನ್ನು ಸ್ವಂತ ಬ್ರಾಂಡ್‍ನಲ್ಲಿ ತಯಾರಿಸಿ ಮಾರುಕಟ್ಟೆಗೆ ತರುತ್ತಿದೆ.
ಇದರಿಂದಾಗಿ ರೈತರುಈ ಗೊಬ್ಬರವನ್ನು ಬಳಸುವುದರಿಂದತಮ್ಮ ಅಡಿಕೆ, ಕಾಳುಮೆಣಸು, ತೆಂಗು, ಬಾಳೆ ಹಾಗೂ ಶುಂಠಿ ಮುಂತಾದ ಬೆಳೆಗಳಲ್ಲಿ ಸಮೃದ್ಧ ಇಳುವರಿ ಪಡೆಯುವುದರ ಜೊತೆಗೆ ಎಲ್ಲಾ ಬೆಳೆಗಳಿಗೆ ಸೂಕ್ತವಾದದ್ದಾಗಿರುತ್ತದೆ. 50ಕೆ.ಜಿ. ಚೀಲಕ್ಕೆ ರೂ.375 ರಂತೆ ಸಂಘದ ಕೃಷಿ ಸುಪರ್ ಮಾರ್ಕೆಟ್‍ನಲ್ಲಿಲಭ್ಯವಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.