ಹೊನ್ನಾವರ : ಶಿಕ್ಷಣ ಮತ್ತು ಸಾಹಿತ್ಯ ಪ್ರೇಮದಿಂದ ಮನಸ್ಸಿಗೆ ಮುದ ದ ಜೊತೆ ಅಪಾರ ಜ್ಞಾನ ದೊರೆಯುತ್ತದೆ ಎಂದು ಖ್ಯಾತ ಸಾಹಿತಿಗಳು ಚಿಂತಕರು ಆದ ಶ್ರೀನಿವಾಸ ವಾಡಪ್ಪಿ ಅಭಿಪ್ರಾಯಪಟ್ಟರು.
ಅವರು ಹೊನ್ನಾವರದ ಎಸ್.ಡಿ.ಎಂ.ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಪ್ರಸುತ್ತ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ವಾರ್ಷೀಕ ಸಂಚಿಕೆಯಾದ ಶರಾವತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಎಸ್.ಡಿ.ಎಂ. ಸಂಸ್ಥೆ ಹಿಂದಿನಿಂದಲೂ ಅನೇಕ ಸಾಧನೆಯನ್ನು ಮಾಡುತ್ತಿದ್ದು ಉತ್ತಮ ಅಧ್ಯಾಪಕ ವೃಂದ ಹೊಂದಿದೆ. ಇಲ್ಲಿ ಕೇವಲ ಶಿಕ್ಷಣವನ್ನು ಕಲಿಸದೆ ಮುಂದಿನ ಬದುಕಿನ ದಾರಿ ಕಲಿಸಲಾಗುತ್ತದೆ ಎನ್ನುವುದಕ್ಕೆ ಸಂಸ್ಥೆಯ ವಿದ್ಯಾರ್ಥಿಗಳ ಸಾಧನಾ ವರದಿಯೆ ಸಾಕ್ಷಿ. ,ನಮ್ಮೆಲ್ಲ ಸಾಧನೆ ಹಾಗೂ ಸೋಲಿಗೆ ಮನಸ್ಸೇ ಕಾರಣ. ಅಂಕ ಗಳಿಕೆಯಿಂದ ಮಾತ್ರ ಯಶಸ್ಸು ಸಾಧ್ಯವಿಲ್ಲ. ಉತ್ತಮ ಸಂವಹನಾ ಕೌಶಲ್ಯ ಹಾಗೂ ಆತ್ಮವಿಶ್ವಾಸವಿದ್ದರೆ ಬದುಕಿನನಲ್ಲಿ ಹೆಚ್ಚಿನ ಸಾಧನೆ ಮಾಡಬಹುದು. ಶಿಕ್ಷಣ ಜೊತೆ ಕಲೆಯ ಬಗ್ಗೆಯೂ ಆಸಕ್ತಿ ಮೂಡಿಸಿಕೊಳ್ಳಿ ಎಂದು ವಿಧ್ಯಾರ್ಥಿಗಳಿಗೆ ಕರೆ ನೀಡಿದರು.
ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಧಾರವಾಡದ ಮಲ್ಲಸಜ್ಜನ ವ್ಯಾಯಾಮ ಮತ್ತು ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಆನಂದ ನಾಡಿಗೇರ ಮಾತನಾಡಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಷಯಗಳ ಸತ್ಯಾಸತ್ಯತೆಯನ್ನು ಅರಿಯದೆ ಅವುಗಳನ್ನು ಒಪ್ಪಿಕೊಳ್ಳುವುದು ಅಪಾಯಕಾರಿಯಾಗಿದ್ದು ಇ ಕುರಿತು ಯುವ ಜನತೆ ಜಾಗ್ರತಿ ವಹಿಸಬೇಕಿದೆ. ನಾವು ತಿಳಿದುಕೊಂಡಿದ್ದೇ ಸರಿ ಎಂಬ ಭಂಡತನ ಪ್ರಗತಿಗೆ ಮಾರಕ. ವಿನಯ ಹಾಗೂ ಸೋಲನ್ನು ಸ್ವೀಕರಿಸುವ ಕ್ರೀಡಾಮನೋಭಾವ ಪ್ರತಿಯೊರ್ವರು ಅಳವಡಿಸಿಕೊಳ್ಳಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತ ವಹಿಸಿದ ಪ್ರಾಚಾರ್ಯೆ ಡಾ.ವಿಜಯಲಕ್ಷ್ಮಿ ಎಂ.ನಾಯ್ಕ ಮಾತನಾಡಿ,”ಶಿಕ್ಷಕರಿಗೆ ಹೃದಯವಂತಿಕೆ ಹಾಗೂ ವಿದ್ಯಾರ್ಥಿಗಳಿಗೆ ವಿನಯ ಬೇಕು’ ಎಂದು ಹೇಳಿದರು. ವೇದಿಕೆಯಲ್ಲಿ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ, ಕಾರ್ಯದರ್ಶಿ ಎಸ್.ಎಂ.ಭಟ್ಟ, ಇದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷೆ ರೇಣುಕಾದೇವಿ ಗೋಳಿಕಟ್ಟೆ, ಪ್ರೊ.ಆರ್.ಕೆ.ಮೇಸ್ತ, ಪ್ರಶಾಂತ ಹೆಗಡೆ ಮೂಡಲಮನೆ, ವಿವೇಕ ನಾಯ್ಕ ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿಗಳಾದ ಸಚಿನ್ ದೇವಾಡಿಗ, ಸುಬ್ರಹ್ಮಣ್ಯ ನಾಯ್ಕ, ಸಚಿನ್ ಭಟ್ಟ ಉಪಸ್ಥಿತರಿದ್ದರು.
.ಪ್ರೊ.ಪ್ರಶಾಂತ ಹೆಗಡೆ ಸ್ವಾಗತಿಸಿ, ಪ್ರೊ.ವಿವೇಕ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಡಾ.ರೇಣುಕಾದೇವಿ ಗೋಳಿಕಟ್ಟೆ ವರದಿ ವಾಚಿಸಿ, ಪ್ರಧಾನ ಕಾರ್ಯದರ್ಶಿ ನಿಖಿಲೇಶ ವಾಳ್ಕೆ ವಂದಿಸಿದರು. ಡಾ.ವಿ.ಎಂ.ಭಂಡಾರಿ ಮತ್ತು ಪ್ರೊ.ನಾಗರಾಜ ಹೆಗಡೆ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ನಡೆದ ಮನರಂಜನಾ ಕಾರ್ಯಕ್ರಮ ಗಮನ ಸೆಳೆಯಿತು.