ಶಿರಸಿ : ದೇಶ ಕಾಯುವ ಯೋಧರಿಗೆ ಬೇರೆ ಬೇರೆ ವಿಧಾನದಲ್ಲಿ ಗೌರವ ಸಲ್ಲಿಸೋರ ಸಾಲು ಸಾಲುಗಳನ್ನೇ ನಾವು ಕಾಣಬಹುದು. ಹೌದು ಶಿರಸಿಯಲ್ಲೊಬ್ಬರು ಸೈನಿಕರಿಗೆ ಗೌರವ ಸಲ್ಲಿಸಲು ಮುಂದಾದ ವಿಧಾನ ಮಾತ್ರ ಇದೀಗ ಎಲ್ಲರ ಗಮನ ಸೆಳೆದಿದೆ.
ನಗರದಲ್ಲಿ ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆ ಯೊಂದಿದೆ.ಇದರಲ್ಲಿ ಇರುವ ಆಯುರ್ವೇದ ಚಿಕಿತ್ಸೆಗೆ ಹೆಸರಾದ ಪಟವರ್ಧನ್ ಕುಟುಂಬದ ಹಾಲಿ ವೈದ್ಯ ರವಿ ಪಟವರ್ಧನ್ ಅಪ್ಪಟ ದೇಶಾಭಿಮಾನಿಯಾಗಿದ್ದಾರೆ.
ಮೊನ್ನೆ ನಡೆದ ಪುಲ್ವಾಮಾ ಘಟನೆಗೆ ಮಮ್ಮಲ ಮರುಗಿದ ಅವರು, ಸೈನಿಕರಿಗೆ ಏನಾದರೂ ನೀಡಬೇಕಲ್ಲಾ ಎಂದು ನಿರ್ಧರಿಸಿ, ಯೋಧರು ಹಾಗೂ ಅವರ ಕುಟುಂಬಸ್ಥರಿಗೆ ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ.
ನಗರದಲ್ಲಿ 150 ಕ್ಕೂ ಹೆಚ್ಚು ಸೈನಿಕ ಕುಟುಂಬಗಳಿದ್ದು, 15ಕ್ಕು ಹೆಚ್ಚು ಕುಟುಂಬಗಳು ಚಕಿತ್ಸೆಗಾಗಿ ಈ ಆಸ್ಪತ್ರೆಗೆ ಬರುತ್ತಿದ್ದಾರೆ. ಸದಾ ಹಲವು ಸೇವಾ ಕೆಲಸಗಳಲ್ಲಿ ತೊಡಗಿರುವ ರವಿ ಪಟವರ್ಧನ್ ರಕ್ತ ದಾನಿಗಳ ಸಮೂಹವನ್ನೇ ರಚಿಸಿದ್ದಾರೆ.
ಅವಶ್ಯಕತೆ ಇದ್ದವರಿಗೆ ಸಂಪರ್ಕ ಸೇತುವಾಗಿಯೂ ಕೆಲಸ ಮಾಡುತ್ತಿದ್ದಾರೆ. ಇಂತಹ ಉತ್ತಮ ಕೆಲಸವನ್ನು ಮಾಡಿ ಸೈನಿಕರಿಗೆ ನೆರವಾಗಿರುವ ಡಾ. ಪಟವರ್ಧನ್ ಇತರರಿಗೂ ಮಾದರಿಯಾಗಿದ್ದಾರೆ. ಅದಲ್ಲದೇ ಎಲ್ಲರೂ ಇವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.