ಗೋಕರ್ಣ: ಪರಶಿವನ ಆತ್ಮಲಿಂಗವಿರುವ ಭೂಕೈಲಾಸ ಗೋಕರ್ಣದ “ಶಿವರಾತ್ರಿ’ವಿಶೇಷತೆ ಪಡೆದಿದೆ. ಇಲ್ಲಿ ಜಾತಿ ಭೇದವಿಲ್ಲದೇ ಭಕ್ತರಿಗೆ ತಮ್ಮ ಕೈಯಿಂದಲೇ ಆತ್ಮಲಿಂಗವನ್ನು ಮುಟ್ಟಿ ಪೂಜಿಸುವ ಭಾಗ್ಯವಿದೆ.

ಈ ಕಾರಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಶಿವರಾತ್ರಿಯಂದು ಸಾವಿರಾರು ಜನರು ಆಗಮಿಸಿ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಶಿವಪಂಚಾಕ್ಷರಿ ಜಪ, ಅರ್ಚನೆ-ಅಭಿಷೇಕ, ಮಂತ್ರ ಪಠಣ, ಭಜನೆ, ಸಂಕೀರ್ತನೆ, ಬಿಲ್ವಾಷ್ಟೋತ್ತರ, ಸಹಸ್ರನಾಮ, ಅರ್ಚನೆ, ಉಪವಾಸ, ಜಾಗರಣೆ ಸಂಗಮವಾಗಿ ಶಿವರಾತ್ರಿ ಆಚರಿಸಲ್ಪಡುತ್ತದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ಅಂತರಾಷ್ರ್ಟೀಯ ಮಾದಕ ವಸ್ತು ವಿರೋಧಿ ದಿನ ಆಚರಣೆ

ಬೆಳಗ್ಗೆಯಿಂದಲೇ ನಾಡಿನಾದ್ಯಂತ ಶಿವಭಕ್ತರು ಪೂಜೆ ಸಲ್ಲಿಸಲು ಭೇಟಿ ನೀಡುತ್ತಾರೆ. ಕಡಲತಡಿಯಲ್ಲಿ ಮರಳಿನ ಲಿಂಗ ನಿರ್ಮಿಸಿ, ಸಮುದ್ರ ಸ್ನಾನ ಹಾಗೂ ಕೋಟಿತೀರ್ಥ, ರಾಮತೀರ್ಥಗಳಲ್ಲಿ ಪುಣ್ಯಸ್ನಾನಗೈದು ಭಕ್ತಿಯಿಂದ ಜಪ-ತಪಾದಿಗಳನ್ನು ನಡೆಸುವುದು ಕಂಡುಬರುತ್ತದೆ.

ಭೂಕೈಲಾಸ-ಆತ್ಮಲಿಂಗದ ದಿವ್ಯ ಸನ್ನಿಧಿ- ಶ್ರೀಕ್ಷೇತ್ರ ಗೋಕರ್ಣದಲ್ಲಿ- ಶಿವರಾತ್ರಿಯ ಪುಣ್ಯಪರ್ವಕಾಲದಲ್ಲಿ ಶ್ರೀ ಮಹಾಬಲೇಶ್ವರ ದೇವರ ದರ್ಶನಕ್ಕೆ  ಜನಸಾಗರ ಸೇರಿತ್ತು . 

RELATED ARTICLES  ಮಾಸ್ಕ್ ನಲ್ಲಿ ಚಿನ್ನ ಸಾಗಿಸಲು ಯತ್ನಿಸಿದ ಭೂಪ : ಉತ್ತರ ಕನ್ನಡ ಮೂಲದ ವ್ಯಕ್ತಿ ಅಧಿಕಾರಿಗಳ ಬಲೆಗೆ

ಪ ಪೂ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ , ಉಪಾಧಿವಂತ ಮಂಡಲದ ವತಿಯಿಂದ ವಿವಿಧ ಧಾರ್ಮಿಕ ವಿನಿಯೋಗಗಳು ಜರುಗಿದವು . 

ಆಗಮಿಸಿದ ಭಗವದ್ಭಕ್ತರಿಗೆ  ಅಮೃತಾನ್ನ ವಿಭಾಗದಲ್ಲಿ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು .