ಕುಮಟಾ: ಮಹಾಶಿವರಾತ್ರಿ ನಿಮಿತ್ತ ತಾಲೂಕಿನ ಕಡ್ಲೆಯ ಕಡಲ ತೀರದಲ್ಲಿ ಶಿವರಾತ್ರಿ ಉತ್ಸವ ಸಮಿತಿ ವತಿಯಿಂದ ಮರಳಿನಿಂದ 30 ಅಡಿಯ ಶಿವನ ಪ್ರತಿಮೆ ನಿಮಿ೯ಸಲಾಗಿದ್ದು ಜನತೆಯ ಮನ ಗೆಲ್ಲುವಲ್ಲಿ ಈ ಸ್ಥಳ ಮಹತ್ವ ಪಡೆಯಿತು.
ಇದೇ ಸ್ಥಳದಲ್ಲಿ ಇತ್ತೀಚೆಗೆ ಅಗಲಿದ ನಡೆದಾಡುವ ದೇವರು ಎಂದೇ ಖ್ಯಾತರಾದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮಿಗಳ ಪ್ರತಿಮೆ ಜನಾಕರ್ಷಣೆಯ ಕೇಂದ್ರವಾಗಿತ್ತು.
ವೆಂಕಟ ಆಚಾರಿ, ಗಣೇಶ ಆಚಾರಿ ಹಾಗೂ ಸಂಗಡಿಗರು ಈ ಮರಳು ಶಿಲ್ಪ ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.