ಕುಮಟಾ: ಡಿಎಸ್‍ಇಆರ್‍ಟಿ ಪ್ರತಿವರ್ಷ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 8 ನೇ ತರಗತಿ ವಿದ್ಯಾರ್ಥಿಗಳಿಗಾಗಿ ನ್ಯಾಶನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್‍ಶಿಫ್ (ಎನ್.ಎಂ.ಎಂ.ಎಸ್) ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದೆ.
2018 ರ ಈ ಪರೀಕ್ಷೆಯಲ್ಲಿ ಶ್ರೇಯಾಂಕಿತರಾಗಿ ವಿದ್ಯಾರ್ಥಿವೇತನಕ್ಕೆ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಕುಮಾರಿ ದೀಕ್ಷಾ ಸತ್ಯನಾರಾಯಣ ಗುನಗಾ ಹಾಗೂ ಕುಮಾರಿ ನಾಗಶ್ರೀ ಅಶೋಕ ನಾಯ್ಕ ಇವರಿಬ್ಬರು ಆಯ್ಕೆಯಾಗಿದ್ದಾರೆ.
ಇವರಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನವದೆಹಲಿ ವತಿಯಿಂದ ವರ್ಷಕ್ಕೆ ರೂ. 6000 ದಂತೆ ನಾಲ್ಕು ವರ್ಷಗಳವರೆಗೆ ವಿದ್ಯಾರ್ಥಿವೇತನ ಲಭಿಸಲಿದೆ. ವಿಜ್ಞಾನ ವಿಭಾಗದ ಶಿಕ್ಷಕರಾದ ಕಿರಣ ಪ್ರಭು ಮತ್ತು ಅನಿಲ್ ರೊಡ್ರಿಗಸ್ ಮಾರ್ಗದರ್ಶನ ನೀಡಿದ್ದರು. ಸಾಧನೆಗೆ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿನಂದಿಸಿದ್ದಾರೆ.