ಕುಮಟಾ: ಶ್ರೀಕ್ಷೇತ್ರ ಗೋರೆಯಲ್ಲಿ ಸದ್ಗುರು ಶ್ರೀಧರ ಸ್ವಾಮಿಗಳ ಸಮಗ್ರ ಜೀವನ ಚರಿತ್ರೆಯನ್ನು ಗದ್ಯ-ಪದ್ಯ ಕಲಾಪದ ಮೂಲಕ ವಿಶೇಷ ಸಂಯೋಜನೆಯ ಸದ್ಗುರು ಶ್ರೀಧರ ಚರಿತಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಾರ್ಚ್ 14 ರಿಂದ ಮಾಚ್ 18ರ ವರೆಗೆ ಪ್ರತಿದಿನ ಸಾಯಂಕಾಲ 5 ಗಂಟೆಯಿಂದ 7 ಗಂಟೆ ವರೆಗೆ ಸದ್ಗುರು ಶ್ರೀಧರ ಚರಿತಾಮೃತ ಕಾರ್ಯಕ್ರಮವನ್ನು ದಿವಗಿಯ ಶ್ರೀ ರಾಮಾನಂದ ಸ್ವಾಮೀಗಳ ದಿವ್ಯ ಉಪಸ್ಥಿತಿಯಲ್ಲಿ ಸಂಯೋಜಿಸಲಾಗಿದೆ. ಹರಿದಾಸ ಗಣಪತಿ ಹೆಗಡೆ ಗೋಪಿ, ವಿಶ್ವೇಶ್ವರ ಭಟ್ಟ ಖರ್ವಾ, ಶ್ರೀಪಾದ ಭಟ್ಟ ಕಡತೋಕಾ ಮತ್ತು ಸಂಗಡಿಗರ ಗಾಯನ ಪ್ರಸ್ತುತಿಯ ಸಂಯೋಜನೆಯಲ್ಲಿ ಈ ಕಾರ್ಯಕ್ರಮ ನೆರವೇರಲಿದೆ.

RELATED ARTICLES  ಅತ್ಯಾಚಾರ ಆರೋಪಿ ಬಂಧನ

ಮಾರ್ಚ್ 18 ರಂದು ಮಧ್ಯಾಹ್ನ 12 ಗಂಟೆಗೆ ಶ್ರೀಧರ ಸ್ವಾಮಿಗಳ ಪಾದುಕಾಪೂಜೆ, ಭಿಕ್ಷಾಸೇವೆ ಮತ್ತು ಸಾರ್ವತ್ರಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀಧರ ಚರಿತಾಮೃತ ನಿರ್ವಹಣಾ ಸಮಿತಿ ಕೋರಿದೆ. ಅಲ್ಲದೆ, ಈ ಪುಣ್ಯತಮ ಜ್ಞಾನ ಯಜ್ಞದಲ್ಲಿ ತನು-ಮನ-ಧನ-ಧಾನ್ಯಗಳಿಂದ ಸೇವೆ ಸಲ್ಲಿಸಲು ಗುರುಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

RELATED ARTICLES  ಬೈಕ್ ಅಪಘಾತ ಸ್ಥಳದಲ್ಲಿಯೇ ಇಬ್ಬರ ದುರ್ಮರಣ