ಕುಮಟಾ: ಇಲ್ಲಿಯ ಪ್ರತಿಷ್ಠಿತ ರೋಟರಿ ಕ್ಲಬ್‍ನ ನೂತನ ವರ್ಷದ 2019-20 ರ ಸಾಲಿನ ಅಧ್ಯಕ್ಷರಾಗಿ, ಕೆನರಾ ಬ್ಯಾಂಕಿನ್ ನಿವೃತ್ತ ಅಧಿಕಾರಿ ಚಿತ್ರಿಗಿಯ ಸುರೇಶ ವೆಂಕಟೇಶ ಭಟ್ಟ, ಕಾರ್ಯದರ್ಶಿಯಾಗಿ ಹೆಗಡೆಯ ಪ್ರಸಿದ್ದ ವಾಣಿಜ್ಯೋದ್ಯಮಿ ಕಿರಣ ಕಾಶಿನಾಥ ನಾಯಕ ಹಾಗೂ ಖಜಾಂಚಿಯಾಗಿ ಮತ್ತೋರ್ವ ಉದ್ಯಮಿ ಗಣೇಶ ಕಾಮತ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.
ಮೂವರೂ ಅತ್ಯಂತ ಕ್ರಿಯಾಶೀಲ ಮತ್ತು ದಕ್ಷ ರೋಟರಿಯ ಸದಸ್ಯರಾಗಿದ್ದು ಜನಹಿತ ಸೇವೆಯ ದೂರದೃಷ್ಠಿತ್ವ ಹೊಂದಿದ್ದು ಇವರ ಅವಧಿಯಲ್ಲಿ ಕುಮಟಾ ರೋಟರಿ ಇನ್ನಷ್ಟು ಪ್ರಜ್ವಲವಾಗಿ ಬೆಳಗಲೆಂದು ರೋಟರಿ ತನ್ನ ಪ್ರಕಟಣೆಯಲ್ಲಿ ಶುಭಹಾರೈಸಿದೆ.