ಕುಮಟಾ: ತಾಲೂಕಿನ ದೀವಗಿಯಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಜ್ಯೋತಿರ್ಲಿಂಗ ರಥಯಾತ್ರೆ ಕಾರ್ಯಕ್ರಮ ದೀವಗಿಯ ಚೇತನ ಸೇವಾ ಸಂಸ್ಥೆಯ ಆಶ್ರಯದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ಕಳೆದ ಹತ್ತು ವರ್ಷಗಳಿಂದ ನಮ್ಮ ಸಂಸ್ಥೆ ಇಂತಹ ಆಧ್ಯಾತ್ಮಿಕ, ಸಾಂಸ್ಕøತಿಕ, ಶೈಕ್ಷಣ ಕ, ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು ಪ್ರತಿವರ್ಷ ಮಹಾಶಿವರಾತ್ರಿ ಹಬ್ಬದಂದು ಗ್ರಾಮದಲ್ಲಿ ಶಿವಲಿಂಗ ರಥಯಾತ್ರೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕಲಿಯುಗದ ಘೋರ ಅಂಧಕಾರದ ರಾತ್ರಿಯಲ್ಲಿ ಪರಮಾತ್ಮ ಶಿವನ ಆಗಮನವೇ ನಿಜವಾದ ಶಿವರಾತ್ರಿ ಆಗಿದೆ. ಜನ್ಮ ಮರಣಗಳ ಚಕ್ರದಲ್ಲಿ ಬರದಿರುವ ಅಜನ್ಮ, ದೇಹವಿಲ್ಲದಿರುವ ವಿದೇಹಿ, ತಾಯಿ ಗರ್ಭ ಪ್ರವೇಶಿಸದಿರುವ ಅಯೋನಿಜ, ಏನನ್ನೂ ಭೋಗಿಸದ ಅಭೋಕ್ತನಾದಂತ ಜ್ಯೋತಿ ರೂಪದಲ್ಲಿರುವ ಪರಮಾತ್ಮನನ್ನು ಹಿಂದೂಗಳು ಜ್ಯೋತಿರ್ಲಿಂಗದ ರೂಪದಲ್ಲಿ ಪೂಜಿಸಿದರೆ ಕ್ರಿಶ್ಚಿಯನ್ನರು ಗಾಡ್ ಈಸ್ ಲೈಟ್ ಎಂದು ಪ್ರಾರ್ಥಿಸುತ್ತಾರೆ. ಮುಸ್ಲಿಂರು ಅಲ್ಲಾ ಏಕ್ ನೂರ್ ಎಂದೂ, ಸಿಖ್ಖರು ಏಕ್ ಓಂಕಾರ ನಿರಾಕಾರನೆಂದೂ, ಜೈನರು ಅರಿಹಂತ (ಬೆಳಕು) ಎಂದೂ, ಸಾಯಿಬಾಬಾ ಸಬ್ ಕಾ ಮಾಲಿಕ್ ಏಕ್ ಎಂದೂ ಜ್ಯೋತಿ ರೂಪದ ಪರಮಾತ್ಮನನ್ನೇ ಆರಾಧಿಸುತ್ತಾರೆ. ಪರಮಾತ್ಮ ನಮ್ಮ ಜೀವನದಲ್ಲಿ ಬಂದ ದಿನದಿಂದ ನಮ್ಮ ಮುಂದಿನ ದಿನಗಳೆಲ್ಲ ಶಿವರಾತ್ರಿಯೇ ಆಗಿದೆ. ಅಂತೆಲ್ಲ ಶಿವ ಪರಮಾತ್ಮನ ಮಹಿಮೆ ಮಾಡಿದರು. ಮತ್ತು ಇಂತಹ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿ ಶಾಂತಿ ನೆಲೆಸುವಂತೆ ಮಾಡುವ ಚಿಕ್ಕ ಅಳಿಲು ಸೇವೆಯೇ ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಅಂತಲೂ ಹೇಳಿದರು.
ರಥಯಾತ್ರೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ದೀವಗಿ ಗ್ರಾ ಪಂ ಸದಸ್ಯ ಸುರೇಶ ಎಸ್ ಭಟ್ ಮಾತನಾಡಿ ದೀವಗಿಯಂತಹ ಚಿಕ್ಕ ಗ್ರಾಮದಲ್ಲೂ ಇಂತಹ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವುದು ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿ ಹರ್ಷ ವ್ಯಕ್ತಪಡಿಸಿ ಮಾತನಾಡಿದರು.
ದೀವಗಿ ಗ್ರಾ ಸೇ ಸ ಸಂಘದ ನಿರ್ದೇಶಕ ಅನಿಲ ಶಿರೋಡ್ಕರ್, ದೀವಗಿ ಡಿಜೆವಿಎಸ್ ಪ್ರೌಢಶಾಲಾ ಶಿಕ್ಷಕಿ ಸುಜಾತ ಎಮ್ ದೇಶಭಂಡಾರಿ, ದೀವಗಿ ಸ ಹಿ ಪ್ರಾ ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷ ಮಾಬ್ಲೇಶ್ವರ ದೇಶಭಂಡಾರಿ, ಮುಖಂಡ ಕೆ ಚಂದ್ರ ಹೆಗಡೆ, ಮುಖಂಡ ನರಸಿಂಹ ಎನ್ ಅಂಬಿಗ, ರಾಮಾ ಡಿ ಗೌಡ ಮಣಕೋಣ, ಶಿಕ್ಷಕ ಎಮ್ ಡಿ ದೇಶಭಂಡಾರಿ, ದೀವಗಿ ಕೆಳಗಿನಕೇರಿ ಸ. ಕಿ. ಪ್ರಾ. ಶಾಲಾ ಎಸ್‍ಡಿಎಮ್‍ಸಿ ಅಧ್ಯಕ್ಷೆ ಸರೋಜ ಡಿ ಅಂಬಿಗ, ಯುವತಿ ಮಂಡಳದ ಅಧ್ಯಕ್ಷೆ ಚೈತ್ರಾ ಆಯ್ ಅಂಬಿಗ ಇನ್ನಿತರರು ಇದ್ದರು. ರಥಯಾತ್ರೆಯಲ್ಲಿ ಚಿಕ್ಕ ಮಕ್ಕಳು ಭಾಗವಹಿಸಿ ಭಗವದ್ಗೀತಾ ಶ್ಲೋಕಗಳನ್ನು ಪಠಿಸುತ್ತಾ ಕಾರ್ಯಕ್ರಮದಲ್ಲಿ ದೈವೀ ಕಳೆಯನ್ನು ತುಂಬಿ ಶೋಭೆ ತರುತ್ತಿದ್ದರು. ಯುವತಿಯರು ಮತ್ತು ಮಹಿಳೆಯರು ಕಲಶವನ್ನು ಹಿಡಿದು ಉತ್ಸುಕತೆಯಿಂದ ಪಾಲ್ಗೊಂಡಿದದರು. ಈ ಮೊದಲು ಬೆಳಿಗ್ಗೆ ಸಂಸ್ಥೆಯ ಕೇಂದ್ರ ಸ್ಥಳದಲ್ಲಿ ಶಿವಧ್ವಜಾರೋಹಣವನ್ನು ಸಂಸ್ಥೆಯ ಅಧ್ಯಕ್ಷ ಆರ್ ಕೆ ಅಂಬಿಗ ನೆರವೇರಿಸಿದ್ದರು. ನಿಲೇಶ ಎನ್ ಅಂಬಿಗ, ಪುರುಸಯ್ಯ ಅಂಬಿಗ, ನರಸಿಂಹ ಬಿ ಅಂಬಿಗ, ಸುರೇಶ ಅಂಬಿಗ ಇನ್ನಿತರರು ಸಹಕರಿಸಿದರು.