ಕುಮಟಾಾ: ಡಾ ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ‘ಸೈನ್ಸ್ ಫೆಸ್ಟ್’ ಎಂಬ ಕಾರ್ಯಕ್ರಮ ವನ್ನು ಕಾಲೇಜಿನ ಚೇರಮನ್ ಮುರಳಿ ಪ್ರಭು ರವರು ಉದ್ಘಾಟಿಸಿದರು..
ಮುಖ್ಯ ಅತಿಥಿಗಳಾಗಿ ಸುಬ್ರಾಯ ವಾಳ್ಕೆ ಭಾಗವಹಿಸಿದ್ದರು .. ಕಾರ್ಯಕ್ರಮದಲ್ಲಿ ಮಾತನಾಡಿದ ವಾಳ್ಕೆ ವಿದ್ಯಾರ್ಥಿ ಜೀವನ ಬಹಳ ಪ್ರಮುಖವಾದ ಜೀವನದ ಘಟ್ಟ.. ಅದನ್ನು ಸರಿಯಾಗಿ ನಿಭಾಯಿಸಬೇಕು.. ನಮ್ಮ ಮುಂದಿನ ಜೀವನದ ಗುರಿಯ ಬಗ್ಗೆ ವಿದ್ಯಾರ್ಥಿಗಳು ಈಗಲೇ ಸ್ಪಷ್ಟ ನಿರ್ಧಾರ ಕೈಗೊಂಡಿರಬೇಕು. ದೇಶಪ್ರೇಮ ನಮ್ಮ ರಕ್ತದ ಕಣ ಕಣದಲ್ಲಿ ಹರಿಯುತ್ತಿರಬೇಕು… ದೇಶ ಮೊದಲು ಎಂಬುದನ್ನು ನಾವು ಯಾವತ್ತೂ ಮರೆಯಬಾರದು ಎಂದು ತಿಳಿಸಿದರು..
ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು..
ಇದೇ ಸಂದರ್ಭದಲ್ಲಿ ಸುಬ್ರಾಯ ವಾಳ್ಕೆ ಯವರನ್ನು ಗೌರವಿಸಲಾಯಿತು..