ಕುಮಟಾ: ನಾಡಿನ ಯಕ್ಷಗಾನ ಪರಂಪರೆಯ ನಿತ್ಯಮಿಂಚು ಜಲವಳ್ಳಿ ವೆಂಕಟೇಶ್ ರಾವ್ ಅವರು ನಿಧನರಾದದ್ದು ನೋವಿನ ಸಂಗತಿ. ತಮ್ಮ ವಿನಯ ಮತ್ತು ಪ್ರತಿಭೆಯ ಮೂಲಕ ಎತ್ತರೆತ್ತರಕ್ಕೇರಿದ ಜಲವಳ್ಳಿ ಅವರು ಉದಯೋನ್ಮುಖ ಕಲಾವಿದರಿಗೆ ಅದ್ಭುತ ಮಾದರಿ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ತಿಳಿಸಿದ್ದಾರೆ.
‘ವಸಂತ ಸೇನೆ’ಯಲ್ಲಿ ಜಲವಳ್ಳಿ ವೆಂಕಟೇಶ್ ರಾವ್ ಮತ್ತು ಕುಮಟಾ ಗೋವಿಂದ ನಾಯ್ಕ ಅವರ ಜೋಡಿಯಲ್ಲಿ ಶಕರ ಮಕರ ಪಾತ್ರಗಳು ಇನ್ನೂ ಅಚ್ಚಳಿಯದ ನೆನಪಾಗಿ ಎಲ್ಲರಲ್ಲಿ ಉಳಿಯುತ್ತವೆ. ರಗಸ್ಥಳದಲ್ಲಿ ಅವರು ಎಂದೂ ಗಂಭೀರತೆ ಬಿಟ್ಟುಕೊಡದ ಕಲಾವಿದರಾಗಿ ದಾಖಲಾರುತ್ತಾರೆ.
ಅವರೊಟ್ಟಿಗೆ ತಾವು 2011ರಲ್ಲಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನಕ್ಕೆ ಹೋದದ್ದು ತಮಗೆ ಒಂದು ಆಪ್ತ ನೆನಪಾಗಿ ಉಳಿಯುತ್ತದೆ ಎಂದು ಅರವಿಂದ ಕರ್ಕಿಕೋಡಿ ಅವರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.