ಕುಮಟಾ : ಕೇಂದ್ರ ಸರಕಾರದ‌ ಮಹಾತ್ವಕಾಂಕ್ಷಿ ಕಾರ್ಯವಾಗಿರುವ ಆಧರ್ ಕಾರ್ಡ ಇದೀಗ ಸಾಮಾನ್ಯ ಜನತೆಗೆ ಸಮಸ್ಯೆ ಯಾಗಿ ಎದುರಾಗುತ್ತಿದೆ. ಒಂದು ಆಧಾರ್ ಕಾರ್ಡ ನಂಬರ್ ಬದಲಾವಣೆಗೆ ಪರದಾಡುವಂತಾಗಿದೆ.

ಈ ಹಿಂದೆ ಒಂದು ಆಧಾರ್ ಕಾರ್ಡ ನಂಬರ್ ಬದಲಾವಣೆ ಮಾಡಬೇಕಾದರೆ ಅರ್ಧ ಗಂಟೆ ಸಾಕಾಗುತ್ತಿತ್ತು. ಆದರೆ ಇದೀಗ ಅದೆ ಒಂದು ನಂಬರ್ ಬದಲಾವಣೆಗೆಗಾಗಿ ಜನ ಕಚೇರಿಗೆ ಅಲೆದಾಡಬೇಕಾಗಿದೆ.

RELATED ARTICLES  ಸಂಕ್ರಾಂತಿಗೊಂದು ವಿಶೇಷ ಆಚರಣೆ : ಗೋ ಸ್ವರ್ಗದಲ್ಲಿ ನಡೆಯಲಿದೆ ಗೋದಿನ ಮತ್ತು ಆಲೆಮನೆ ಹಬ್ಬ

ಕುಮಟಾದಲ್ಲಿ ಮೊದಲು ಆದಾರ್ ಕಾರ್ಡ್ ಬದಲಾವಣೆಯನ್ನು ತಹಶೀಲ್ದಾರ ಕಚೇರಿಯಲ್ಲಿ ಮಾಡಲಾಗುತ್ತಿತ್ತು ಆದರೆ ಈಗ ಅದನ್ನು ಖಾಸಗಿಯವರಿಗೆ ನೀಡಲಾಗಿದೆ. ಅಷ್ಟೆ ಅಲ್ಲ‌ ಇದರ ಗುತ್ತಿಗೆ ಪಡೆದ ಖಾಸಗಿಯವರು ತಮ್ಮ‌ ಕಚೇರಿಯನ್ನು ಪಟ್ಟಣದಿಂದ ನಿರ್ಜನ ಪ್ರದೇಶದಲ್ಲಿ ಇಟ್ಟು ಕೊಂಡಿರುವದು ನಾಗರಿಕರಿಗೆ ತೊಂದರೆ ಆಗುತ್ತಿದೆ. ಕಾರ್ಡ ನಂಬರ್ ಬದಲಾವಣೆ ಅಥವಾ ಬೇರೆ ಯಾವುದೇ ಸಮಸ್ಯೆಗಾಗಿ ಇಲ್ಲಿಗೆ ಬಂದರೆ ಒಂದು ಹನಿ ಕುಡಿಯಲು ಸಹ ನೀರು ಸಿಗುತ್ತಿಲ್ಲ ಎನ್ನುವ ಆರೋಪ ಗ್ರಾಹಕರಿಂದ ಕೇಳಿ ಬರುತ್ತಿದೆ.

RELATED ARTICLES  ರೈತರ ಹಾಗೂ ಇತರ ಎಲ್ಲ ಸಾಲ ಮನ್ನಾ ಮಾಡಿ : ದಿನಕರ ಶೆಟ್ಟಿ

ಒಟ್ಟಿನಲ್ಲಿ ಆಧಾರ್ ಕಾರ್ಡ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದೆ.