ಶಿರಸಿ : ತಾಲ್ಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ ,ಜಾನ್ಮನೆ ವಲಯ ಅರಣ್ಯ ಇಲಾಖೆ ಕಾರ್ಯಾಲಯ ಹಾಗೂ ಪ್ರೌಢಶಾಲೆಯ ಶ್ರೀ ಜಗದೀಶ ಚಂದ್ರ ಬೋಸ್ ಇಕೋ ಕ್ಲಬ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವನ್ಯ ಜೀವಿ ದಿನಾಚರಣೆ ಹಾಗೂ ವನ್ಯಜೀವಿ ಸಪ್ತಾಹ ಮತ್ತು ಬೆಂಕಿಯಿಂದ ಅರಣ್ಯ ರಕ್ಷಣೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಮತಿ ಪವಿತ್ರಾ.ಯು.ಜೆ, ವಲಯ ಅರಣ್ಯಾಧಿಕಾರಿಗಳು ಜಾನ್ಮನೆ ಮಾತನಾಡಿ ಪರಿಸರವು ಇಂದು ವೇಗವಾಗಿ ಕಲುಷಿತವಾಗುತ್ತಿದೆ. ಇದಕ್ಕೆ ಕಾರಣ ಮಾನವನಲ್ಲಿರುವ ದುರಾಸೆಗಳು. ಪ್ರಾಣಿಗಳಿಂದ ಇಂದು ಒಂದಿಂಚು ಪರಿಸರವು ಹಾಳಾಗಿಲ್ಲ. ಅರಣ್ಯಗಳು ಹಾಗೂ ಜಲಚರ ಜೀವಿಗಳು ಪೃಕೃತಿಯ ಜೀವ ಸಂಕುಲಕ್ಕೆ ಆಮ್ಲಜನಕವನ್ನು ನೀಡುತ್ತಿವೆ. ಆದರೆ ಇತ್ತೀಚೆಗೆ ವಿಕೃತ ಮನಸ್ಥಿತಿಯನ್ನು ಹೊಂದಿರುವ ಮನುಷ್ಯ ಜಲ ಮೂಲಗಳನ್ನು, ಜಲಚರ ಜೀವಿಗಳನ್ನು ನಾಶ ಮಾಡುತ್ತಿದ್ದಾನೆ.ನಮ್ಮ ಭವಿಷ್ಯದ ಬದುಕು ದುರಂತಮಯವಾಗಿದೆ. ಕಾಡನ್ನು ಕಾಪಾಡಿರಿ, ವನ್ಯ ಪ್ರಾಣಿಗಳನ್ನು ಸಂರಕ್ಷಿಸಲು ಭವಿಷ್ಯದ ಪ್ರಜೆಗಳಾದ ತಾವು ಕಾಡಿಗೆ ಹಾಗೂ ಬೆಟ್ಟ ಪ್ರದೇಶಕ್ಕೆ ಮನುಷ್ಯರಿಂದಾಗಲಿ ಅಥವಾ ಕಾಡ್ಗಿಚ್ಚಿನಿಂದಾಗಲಿ ಬೆಂಕಿ ದುರ್ಘಟನೆಗಳು ಸಂಭವಿಸಿದಾಗ ತಕ್ಷಣ ಅರಣ್ಯಾಧಿಕಾರಿಗಳ ಅಥವಾ ನಿಮ್ಮ ಶಿಕ್ಷಕರ ಗಮನಕ್ಕೆ ತಂದು ಅರಣ್ಯ ಸಂರಕ್ಷಣೆಯಲ್ಲಿ ತಮ್ಮ ಅಳಿಲು ಸೇವೆಯನ್ನು ಸಲ್ಲಿಸಬೇಕೆಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಶ್ರೀಮತಿ ಸರಸ್ವತಿ ಎಮ್ ಹೆಗಡೆ,ಅಧ್ಯಕ್ಷರು,ನೆಗ್ಗು ಗ್ರಾಮ ಪಂಜಾಯತ ನೆಗ್ಗು,ಶ್ರೀಮತಿ ಮಮತಾ ಗುಡ್ಡದಮನೆ, ಪಿಡಿಓ,,ನೆಗ್ಗು ಗ್ರಾಮ ಪಂಜಾಯತ ನೆಗ್ಗು ,ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀ ನೂರ್ ಅಹಮದ್,ಶ್ರೀ ಸುರೇಂದ್ರ ಪಾವಸ್ಕರ್ ಉಪಸ್ಥಿತರಿದ್ದರು. ಕುಮಾರಿ ನಿಖಿತಾ ಹೆಗಡೆ ಪ್ರಾರ್ಥಿಸಿದಳು. ಮುಖ್ಯಾಧ್ಯಾಪಕರಾದ ಶ್ರೀ ಎಮ್ ಜಿ ಹೆಗಡೆ ಸ್ವಾಗತಿಸಿದರು. ಶ್ರೀ ಗಣೇಶ ಜಿ ಹೆಗಡೆ ವಂದಿಸಿದರು.ಹಿರಿಯ ಶಿಕ್ಷಕರಾದ ಶ್ರೀ ನಾರಾಯಣ ದೈಮನೆ ಕಾರ್ಯಕ್ರಮ ನಿರೂಪಿಸಿದರು.