ಕುಮಟಾ : ಶ್ರೀ ಗಣರಾಜ ಯಕ್ಷಗಾನ ಮಂಡಳಿ ಕೂಜಳ್ಳಿ, ಶಿಷ್ಯಬಳಗ ಕೂಜಳ್ಳಿ ಮತ್ತು ಸ್ಪಂದನ ವೇದಿಕೆ ಕೂಜಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಪ್ರಸಾದ ಗಣಪತಿ ದೇವಸ್ಥಾನದ ಎದುರಿಗೆ ಹಾಕಿದ ಭವ್ಯ ರಂಗಸಜ್ಜಿಕೆಯಲ್ಲಿ ದಿನಾಂಕ: 22-02-2019 ರಂದು ಪುಸ್ತಕ ಲೋಕಾರ್ಪಣೆ ಹಾಗೂ ಗುರುವಂದನಾ ಕಾರ್ಯಕ್ರಮಗಳಿಗೆ ಸಾವಿರ ಜನ ಸಾಕ್ಷಿಯಾಗಿ ಕಣ್ತುಂಬಿಕೊಂಡರು.
ಯಕ್ಷಗಾನ ಕಲಾವಿದ ಮೋಹನ ನಾಯ್ಕ ಕೂಜಳ್ಳಿರವರ “ಬಾಗಿಲಲಿ ಧರುಮ ನಡೆಯಲಿ” ಹಾಗೂ ಡಾ|| ದೇವಿದಾಸ ನಾಯ್ಕರವರ ಮದ್ದಳೆ ವಾದನ ಪುಸ್ತಕಗಳನ್ನು ಹಿರಿಯ ವಿ.ಗ ನಾಯ್ಕರವರು ಲೋಕಾರ್ಪಣೆಗೊಳಿಸಿದರು. ಪ್ರಾಧ್ಯಾಪಕರು ಅಂಕಣಕಾರರು ಆದ ಡಾ|| ಆರ್.ಜಿ. ಹೆಗ್ಡೆಯವರು ಪುಸ್ತಕದ ಪುಟ -ಪುಟಗಳನ್ನು ತೆರೆದಿಟ್ಟು ಅಧ್ಯಯನಕ್ಕೆ ಯೋಗ್ಯವಾದ ಗ್ರಂಥಗಳೆಂದು ಬಣ್ಣಿಸಿದರು.
ಸಾಹಿತಿಗಳಾದ ಡಾ|| ಎಂ.ಎಚ್. ನಾಯ್ಕರವರು ಗುರುವಂದನಾ ನುಡಿಗಳನ್ನಾಡಿ ನಮ್ಮ ಗುರುಗಳು ಸಾರ್ಥಕ ಬದುಕನ್ನು ಬದುಕಿದವರೆಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯ ಗುರುಗಳಾದ, ಗುರು ಪ್ರಸಾದ ಹೈಸ್ಕೂಲ್ ಸಂಸ್ಥಾಪಕರಾದ ಶ್ರೀ ಅರುಣ ಉಭಯಕರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯ್ತು. ಈ ವೇಳೆಗೆ ಪ್ರಗತಿ ವಿದ್ಯಾಲಯದ ಪ್ರಾಂಶುಪಾಲರಾದ ಎಂ.ಜಿ. ಭಟ್ಟರವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ಸದಾ ನಮ್ಮ ಸಹಾಯ ಸಹಕಾರವನ್ನು ಘೋಷಿಸಿದರು.
ಸನ್ಮಾನ ಸ್ವೀಕರಿಸಿದ ಅರುಣ ಉಭಯಕರರವರು ಮಾತನಾಡಿ ಇದು ನನಗೆ ಜೀವನದ ಅವಿಸ್ಮರಣೀಯ ಕ್ಷಣವೆಂದು ಬಣ್ಣಿಸಿದರು. ಮೋಹನ ನಾಯ್ಕ ಕೂಜಳ್ಳಿರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಡಾ|| ದೇವಿದಾಸ ನಾಯ್ಕ ಪ್ರಾಸ್ತಾವಿಕ ಮಾತನ್ನಾಡಿದರು.
ಇದೇ ವೇದಿಕೆಯಲ್ಲಿ “ಸ್ಪಂದನ ವೇದಿಕೆ ಕೂಜಳ್ಳಿ” ಇವರಿಂದ ಕವಿಗೋಷ್ಠಿ ನಡೆಸಲಾಯ್ತು. ರಂಜನಾ ಆಚಾರಿ ವಾಲಗಳ್ಳಿಯವರಿಂದ ಪ್ರಾರ್ಥಿಸಿದರು. ಹಿರಿಯ ಸಾಹಿತಿ ರೋಹಿದಾಸ ನಾಯ್ಕ ಉದ್ಘಾಟಿಸಿದರು. ಪುಟ್ಟು ಕುಲಕರ್ಣಿಯವರು ಆಶಯದ ನುಡಿಗಳನ್ನಾಡಿದರು. ಎನ್.ಆರ್. ಗಜುರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿಗಳಾದ ಬೀರಣ್ಣ ನಾಯಕ ಹಿರೇಗುತ್ತಿ, ಸಂಧ್ಯಾ ಭಟ್ಟ, ಸುರೇಶ ನಾಯ್ಕ, ಗಣಪತಿ ಕೊಂಡದಕುಳಿ, ಮಾಲಾ ನಾಯ್ಕ, ಎಂ.ಕೆ. ಲಕ್ಷ್ಮೀ, ಕೃಷ್ಣಾನಂದ ಭಟ್ಟ, ಎನ್.ಆರ್. ನಾಯ್ಕರವರು ಸ್ವರಚಿತ ಕವನಗಳನ್ನು ವಾಚಿಸಿದರು. ಹಿರಿಯ ಸಂಸ್ಕøತಿ ವಿ.ಗ. ನಾಯ್ಕರನ್ನು ಸನ್ಮಾನಿಸಲಾಯಿತು. ಕವಯತ್ರಿ ಎಂ.ಕೆ.ಲಕ್ಷ್ಮೀ ಕೂಜಳ್ಳಿರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು, ಗಣೇಶ ಹೆಗ್ಡೆ ಅಭಿನಂದಿಸಿದರು. ಈ ವೇಳೆಗೆ ಅದೇ ವೇದಿಕೆಯಲ್ಲಿ ಶ್ರೀ ಗಣರಾಜ ಯಕ್ಷಗಾನ ಮಂಡಳಿಯವರಿಂದ “ಮೇದಿನಿ ನಿರ್ಮಾಣ” ಎಂಬ ಪೌರಾಣಿಕ ಪ್ರಸಂಗವನ್ನು ಆಡಿ ತೋರಿಸಿದರು. ಸಂಕಷ್ಟಿಹರ ಚತುರ್ಥಿ ನಿಮಿತ್ತ ಪೂಜೆ ಪುನಸ್ಕಾರಗಳು ಕೈಗೊಂಡು ಒಂದು ದಿನದ ಸಾಂಸ್ಕøತಿಕ ಹಬ್ಬ ಸಂಪನ್ನಗೊಂಡಿತು.