ಶಿರಸಿ : 2018-19 ಸಾಲಿನಲ್ಲಿ ಎನ್.ಎಮ್.ಎಮ್.ಎಸ್. ಪರೀಕ್ಷೆಯಲ್ಲಿ ಶಿರಸಿ ತಾಲ್ಲೂಕಿನ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿಯ ವಿದ್ಯಾರ್ಥಿಗಳಾದ ಕುಮಾರ ಧೀರಜ ದತ್ತಾತ್ರೇಯ ನಾಯ್ಕ ಬಾವೀಕೈ ಹಾಗೂ ಕುಮಾರ ಸುಮಂತ ಮಂಜುನಾಥ ಗೌಡ ಮಳಲಿ ಇವರುಗಳು ನವೆಂಬರನಲ್ಲಿ ನಡೆದ ರಾಷ್ಟ್ರೀಯಮಟ್ಟದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯಲು ಅರ್ಹತೆ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರೌಢಶಾಲೆಯ ಅಧ್ಯಕ್ಷರು, ಸಾಮಾಜಿಕ ಚಿಂತಕರೂ ಆದ ಶ್ರೀ ವಿಶ್ವನಾಥ ಶರ್ಮಾ ನಾಡಗುಳಿ ಹಾಗೂ ಆಡಳಿತ ಮಂಡಳಿಯ ಸರ್ವಸದಸ್ಯರುಗಳು, ಶಿಕ್ಷಕ-ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದೆ.