ಶಿರಸಿ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿಯು ಅಡಿಕೆಯನ್ನು “ಶಿರಸಿ ಸುಪಾರಿ” ಎಂದು ಬೌಗೋಳಿಕ ಸನ್ನದ್ದು (Geographical Indication) ನೋಂದಣಿ ಮಾಡಿಸುವ ಮೂಲಕವಾಗಿ ಶಿರಸಿ ಅಡಿಕೆಗೆ ಹೆಚ್ಚಿನ ಮಹತ್ವ ದೊರಕುವಲ್ಲಿ ಮಹತ್ತರ ಪಾತ್ರ ವಹಿಸಿದೆ.
ಬೌಗೋಳಿಕ ಸನ್ನದ್ದಿಗೆ ಸೇರ್ಪಡೆಯಾಗಿರುವುದರಿಂದ ಅಡಿಕೆಯು ಸಹ ಉತ್ಕøಷ್ಟವೆಂದು ಸಾಬೀತಾಗುವುದರ ಜೊತೆಗೆ ಈ ಮೊದಲು ಬೌಗೋಳಿಕ ಸನ್ನದ್ದಿಗೆ ಸೇರ್ಪಡೆಯಾಗಿರುವ ಉತ್ಪನ್ನಗಳ ಜೊತೆಗೆ ಅಡಿಕೆಯೂ ಸೇರಿರುವುದು ಅಡಿಕೆಯ ಜನಪ್ರಿಯತೆಯನ್ನು ಬಹುವ್ಯಾಪಿತ್ವವನ್ನು ತಿಳಿಸುವುದರ ಜೊತೆಗೆ ದೇಶದ ಅನೇಕ ರಾಜ್ಯಗಳಲ್ಲಿ ಇದರ ಉಪಯೋಗ ಇದೆ ಎಂಬುದಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿಶ್ವವ್ಯಾಪಿಯಾಗಿ ಗುರುತಿಸಿಕೊಳ್ಳಬಲ್ಲ ವಿಶಿಷ್ಟತೆಯನ್ನು ಪಡೆದಿದೆ ಎಂಬುದು ಅಡಿಕೆ ಬೆಳೆಗಾರರಿಗೆ ಹೆಮ್ಮೆಯ ವಿಷಯವಾಗಿದೆ.
ಜಾಗತಿಕ ಪೈಪೋಟಿಯಿಂದಾಗಿ ಜಗತ್ತಿನಲ್ಲಿ ಎಲ್ಲಾ ದೇಶಗಳು ಎಲ್ಲಾ ತರಹದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ. ಆದರೆ ಈ ಉತ್ಪನ್ನಗಳು ಮೂಲ ಉಗಮಸ್ಥಾನದ ಗುಣಮಟ್ಟ ಹೊಂದಿರುವುದಿಲ್ಲ. ಈ ಗುಣಮಟ್ಟದ ಉತ್ಪನ್ನಗಳನ್ನು ಗುರುತಿಸುವ ಸಲುವಾಗಿ ಭೌಗೋಳಿಕ ಸನ್ನದ್ದು (Geographical Indication) ಎಂಬ ಹೊಸ ವ್ಯವಸ್ಥೆಯನ್ನು 2003ರಲ್ಲಿ ಜಾರಿಗೆ ತರಲಾಯಿತು. ಇದರಲ್ಲಿ ನೋಂದಣ ಯಾದ ಉತ್ಪನ್ನಗಳು ಯಾವ ಪ್ರದೇಶದಲ್ಲಿ ಬೆಳೆÉಯಲಾಗುತ್ತದೆ ಹಾಗೂ ಅದರ ಗುಣಮಟ್ಟ ಹೇಗಿರುತ್ತದೆ ಎಂದು ನಮೂದಿಸಿರುತ್ತಾರೆ.
ಇದುವರೆಗೆ ಭಾರತದಲ್ಲಿ 325 ಉತ್ಪನ್ನಗಳು ನೋಂದಣಿ ಯಾಗಿರುತ್ತಿದ್ದು ಅದರಲ್ಲಿ ಕರ್ನಾಟಕದ 39 ಉತ್ಪನ್ನಗಳು ಭೌಗೋಳಿಕ ಸನ್ನದ್ದಿನಲ್ಲಿ ನೋಂದಣ ಯಾಗಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಾದ ಅಡಿಕೆ “ಶಿರಸಿ ಸುಪಾರಿ” ಎಂದು ಬೌಗೋಳಿಕ ಸನ್ನದ್ದು ಪಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಹಾಗೂ ಯಲ್ಲಾಪುರ ತಾಲೂಕುಗಳ ಸಾಂಪ್ರದಾಯಿಕ ಬೆಳೆ ಅಡಿಕೆ ಬೆಳೆಯನ್ನೆ ಪ್ರಮುಖವಾಗಿಸಿಕೊಂಡು ನಂಬಿ ಜೀವನ ಮಾಡುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ವಿದೇಶಿ ಅಡಿಕೆಯ ಆಮದಿನಿಂದಾಗಿ ದೇಶಿ ಅಡಿಕೆಯ ಮೇಲೆ ಹೆಚ್ಚಿನ ದುಷ್ಪರಿಣಾಮವಾಗುತ್ತಿದೆ. ಇದರಿಂದಾಗಿ ರೈತರು ಬೆಳೆದ ಅಡಿಕೆಗೆ ನಿಶ್ಚಿತ ಮಾರುಕಟ್ಟೆ ಇಲ್ಲದಂತಾಗಿದೆ. ರೈತರ ಬೆನ್ನಲಬಾಗಿರುವ ಟಿ.ಎಸ್.ಎಸ್. ಸಂಸ್ಥೆ ಈ ರೀತಿ ಶಿರಸಿ ಅಡಿಕೆಯನ್ನು “ಶಿರಸಿ ಸುಪಾರಿ” ಎಂದು ಬೌಗೋಳಿಕ ಸನ್ನದ್ದಿಗೆ ಸೇರ್ಪಡೆ ಮಾಡಿಸುವುದರ ಮೂಲಕವಾಗಿ ಹೊಸ ಇತಿಹಾಸ ನಿರ್ಮಿಸಿದೆ.
ಇದರಿಂದ ಶಿರಸಿ ಅಡಿಕೆಗೆ ಬೇರೆ ಕಡೆಯಿಂದ ಬಂದ ಕಳಪೆ ಅಡಿಕೆಯನ್ನು (ಸಾಗರ, ಹಾವೇರಿ ಅಥವಾ ಗೋವಾ) ಬೆರೆಸಿ ಮಾರುವ ಪ್ರಕ್ರಿಯೆಗೆ ಕಡಿವಾಣ ಬೀಳುವ ಸಾಧ್ಯತೆ ದಟ್ಟವಾಗಿದೆಯೆಂದು ತಿಳಿಯಬಹುದು.