ಭಟ್ಕಳ:- ಬೋಟ್ ನಿಂದ ಬೋಟ್ ಗೆ ಸಾಗುವಾಗ ಆಯ ತಪ್ಪಿ ಬಿದ್ದು ಸಾವು ಕಂಡ ಘಟನೆ ಭಟ್ಕಳದ ಮಾನಿವಕುರ್ವೇ ಬಂದರ ಧಕ್ಕೆಯಲ್ಲಿ ನಡೆದಿದೆ.
ಮೃತ ಮೀನುಗಾರನನ್ನು ಕಾಯ್ಕಿಣಿಯ ಮಠದ ಹಿತ್ಲು ನಿವಾಸಿ ಉದಯ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ. ಮೃತ ಮೀನುಗಾರ ಆನಂದ ಮಂಜ ಖಾರ್ವಿ ಎಂಬುವವವರ ಮಾಲೀಕತ್ವದ ಸಚ್ಚಿದಾನಂದ ಮೀನುಗಾರಿಕಾ ಬೋಟನಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಮೀನುಗಾರಿಕೆ ಸಂಬಂಧ ಒಂದು ಬೋಟನಿಂದ ಇನ್ನೊಂದು ಬೋಟ್ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ದೇಹಕ್ಕಾಗಿ ಸ್ಥಳಿಯರು ಮೀನುಗಾರರು ಸಾಕಷ್ಟು ಗಂಟೆ ಪ್ರಯತ್ನ ಪಟ್ಟಿದ್ದು ನಂತರ ಸ್ಥಳಿಯ ಈಜುಗಾರರು ಬಂದು ಮೃತ ದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಬೋಟ ಮಾಲೀಕ ಆನಂದ ಮಂಜ ಖಾರ್ವಿ ದೂರು ಸಲ್ಲಿಸಿದ್ದು,ಮೃತ ದೇಹವನ್ನು ತಾಲೂಕಾ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.