ಶ್ರೀಮತಿ ಜಾನಕಿ ಸಣ್ಣಪ್ಪ ನಾಯಕ ಹಿರೇಗುತ್ತಿ(ನಿವೃತ್ತ ಶಿಕ್ಷಕಿ) ಇವರು ದಿನಾಂಕ 25-02-2019 ಸೋಮವಾರದಂದು ತಮ್ಮ 81 ನೆಯ ವಯಸ್ಸಿನಲ್ಲಿ ನಿಧನರಾದರು.
ಮೃತರು ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದು, ಉತ್ತಮ ಶಿಕ್ಷಕಿಯಾಗಿ ಸುದೀರ್ಘ 35 ವರ್ಷಗಳ ಕಾಲ ಕಾರವಾರ, ಅಂಕೋಲಾ, ಕುಮಟಾ ಹಾಗೂ ಹಿರೇಗುತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿದ್ದರು.
ಮೃತರು ದಿವಂಗತ ಸಣ್ಣಪ್ಪ ವೆಂಕಣ್ಣ ಗಾಂವಕರ (ಅವರೂ ಸಹ ಶಿಕ್ಷಕರಾಗಿದ್ದರು).ಇವರ ಧರ್ಮಪತ್ನಿಯಾಗಿದ್ದರು. ಮೃತರು ಮಕ್ಕಳಾದ ಸೋಮಶೇಖರ ಗಾಂವಕರ (ಹೈಸ್ಕೂಲ್‍ಶಿಕ್ಷಕರು). ರೋಹಿದಾಸ್ ಗಾಂವಕರ (ಹಿರೇಗುತ್ತಿ ಹೈಸ್ಕೂಲ್ ಮುಖ್ಯಾಧ್ಯಾಪಕರು). ರಾಜು ಗಾಂವಕರ. ಸೊಸೆ ಶ್ಯಾಮಲಾ ನಾಯಕ(ಬಿಇಓ) ಹಾಗೂ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದು ಅವರ ನಿಧನಕ್ಕೆ ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ವೃಂದ ಹಾಗೂ ಮಂಗಳಾ ಕಲಾ ಸಾಹಿತ್ಯ ವೇದಿಕೆಯ ಗೌರೀಶ್ ನಾಯಕ. ವೆಂಕಟ್ರಾಂಮ ನಾಯಕ. ಉದ್ದಂಡ ಗಾಂವಕರ. ಶ್ರೀ ಬ್ರಹ್ಮಜಟಕ ಯುವಕ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಆಪ್ತೆಷ್ಠರು ತೀರಾ ಸಂತಾಪವನ್ನು ಸೂಚಿಸಿದ್ದಾರೆ.
ವರದಿ:ಎನ್ ರಾಮು ಹಿರೇಗುತ್ತಿ