ಪ್ರತಿ ವರ್ಷ ಮಾರ್ಚ್ 8 ರಂದು ವಿಶ್ವ ಮಹಿಳಾ ದಿನಾಚರಣೆಯ ದಿನವೆಂದು ಆಚರಿಸಲಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಪ್ರಾಧಾನ್ಯತೆಯನ್ನು ಸ್ಥಾಪಿಸುವ ಉದ್ದೇಶ ಮತ್ತು ಪ್ರಯತ್ನ ಈ ಆಚರಣೆಯ ಹಿಂದೆ ಇದೆ. 

ಭಾರತದಲ್ಲಿ ಎರಡು ರೀತಿಯ ಸಮಾಜವನ್ನು ಕಾಣಬಹುದು. ಒಂದು ಗ್ರಾಮೀಣ ಭಾರತ ಮತ್ತೊಂದು ನಗರ ಭಾರತ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಗ್ರಾಮೀಣ ಭಾರತದ ಮಹಿಳೆ ನಗರ ಭಾರತದ ಮಹಿಳೆಗಿಂತ ಬಹಳ ಹಿಂದೆ ಇದ್ದಾಳೆ. ಅಷ್ಟೇ ಆಕೆ ಇವೆಲ್ಲಾ ವಿಚಾರಗಳಲ್ಲಿ ಪುರುಷನಿಗಿಂತ ಹಿಂದೆ ಇದ್ದಾಳೆ.

ಅಂದರೆ ನಗರ ಭಾರತದ ಮಹಿಳೆ ನೂರಕ್ಕೆ ನೂರರಷ್ಟು ಈ ಎಲ್ಲಾ ವಿಚಾರಗಳಲ್ಲಿ ಸಾಧಿಸಿದ್ದಾಳೆ ಎಂದಾಗಲಿ ಮತ್ತು ನಗರದ ಮಹಿಳೆ ಇವೆಲ್ಲಾ ವಿಚಾರಗಲ್ಲಿ ಪುರುಷನೊಂದಿಗೆ ಸಾಕಷ್ಟು ಸರಿಸಮನಾಗಿದ್ದಾಳೆ ಎಂದು ಅರ್ಥವಲ್ಲ. ಆದರೆ ಈ ದಾರಿಯಲ್ಲಿ ಗ್ರಾಮೀಣ ಮಹಿಳೆ ನಗರದ ಮಹಿಳೆಗಿಂತ ಬಹಳಷ್ಟು ಹಿಂದೆ ಉಳಿದಿದ್ದಾಳೆ ಎನ್ನುವುದು ಸುಳ್ಳಲ್ಲ. ಈ ಅರಿವನ್ನು ಗ್ರಾಮೀಣ ಮಹಿಳೆಗೆ ಹೆಚ್ಚು ಪಾಲು ಮತ್ತು ಒಂದು ಮಟ್ಟಕ್ಕೆ ನಗರದ ಮಹಿಳೆಗೂ ಸಹ ತಂದು ಕೊಡುವ ಕೆಲಸ ಮಹಿಳಾ ದಿನಾಚರಣೆಯಿಂದ ಆಗಬೇಕಾಗಿದೆ.

RELATED ARTICLES  ಕಾರಿನ ಮೇಲೆ ಮುರಿದು ಬಿದ್ದ ಮರ.

ಪುರುಷ ಮತ್ತು ಮಹಿಳೆ ಬದುಕಿನ ಬಂಡಿಯ ಎರಡು ಚಕ್ರಗಳು ಎನ್ನುವುದು ಸುಳ್ಳಲ್ಲ. ಯಾವುದು ಹಿಂದೆ ಬಿದ್ದರೂ ಗಾಡಿ ಮುಂದೆ ಸಾಗಲಾರದು. ನಮ್ಮ ಹಿಂದಿನ ಸಾಮಾಜಿಕ ಪರಂಪರೆಯಲ್ಲಿ ಪುರುಷ ದುಡಿಯಬೇಕು. ಮಹಿಳೆ ಅವನ ದುಡಿತವನ್ನು ಸಂಸಾರಕ್ಕೆ ಸರಿಯಾಗಿ ವಿನಿಯೋಗಿಸಿ ಜೀವನರಥವನ್ನು ಮುನ್ನಡಿಸಬೇಕು ಎನ್ನುವುದಾಗಿತ್ತು. ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಲ್ಲಿ ಈ ಪರಂಪರೆ ಶಿಥಿಲಗೊಳ್ಳುತ್ತಿದೆ. ನಮ್ಮ ಸಾಮಾಜಿಕ ಜೀವನ ಸ್ಥಿತ್ಯಂತರಗೊಳ್ಳುತ್ತಿದೆ. ಇಂಥಹ ಸಂಧಿಗ್ದ ಸನ್ನಿವೇಶದಲ್ಲಿ ಗೊಂದಲಗಳು ಮತ್ತು ಘರ್ಷಣೆಗಳು ನಿರೀಕ್ಷಿತ. ಇಂತಹ ಅವಘಡಗಳನ್ನು ತಿಳಿಗೊಳಿಸುವ ಮತ್ತು ಸರಿಪಡಿಸುವ ಕೆಲಸ ವಿಶ್ವ ಮಹಿಳಾದಿನಾಚರಣೆಯಿಂದ ಆಗಬೇಕಾಗಿದೆ.

ಸಮಾಜದ ನಿರಂತರ ಪ್ರಕ್ರಿಯೆಗೆ ಮಹಿಳೆ ಮತ್ತು ಪುರುಷರಿಬ್ಬರ ಅಗತ್ಯ ಮತ್ತು ಅನಿ ವಾರ್ಯತೆ ಇರುವುದರಿಂದ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು, ಒಂದೇ ರಥದ ಎರಡು ಚಕ್ರಗಳಿದ್ದಂತೆ.ಆದರೂ ಸ್ತ್ರೀ ಮತ್ತು ಪುರುಷರಿಬ್ಬರ ನಡುವೆ ವ್ಯತ್ಯಾಸವೂ ಇದೆ. ಸ್ತ್ರೀಯರ ಪಾತ್ರ ,ಅಂತಸ್ತು,ಸ್ವರೂಪ ಬೇರೆ ಬೇರೆಯಾಗಿವೆ. ಅದರಲ್ಲೂ ಭಾರತೀಯ ಸಮಾ ಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಎಲ್ಲದರಲ್ಲೂ ಸಮಾನತೆ ಕಂಡು ಬರುವುದಿಲ್ಲ.

RELATED ARTICLES  ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ : ಆರ್.ವಿ ದೇಶಪಾಂಡೆ

ಮಹಿಳೆಯರಿಗೆ ಕೇವಲ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ,ಸ್ವಲ್ಪ ಮಟ್ಟಿಗೆ ಸಂತೋಷ ನೀಡಿ, ಮಕ್ಕಳ ಪಾಲನೆ,ಪೋಷಣೆ,ಮನೆಯ ಕೆಲಸಗಳನ್ನು ನಿರ್ವಹಿಸ ಬೇಕು ಎಂದು ಹಿಂದಿನ ಕಾಲದಿಂದಲೂ ಸಮಾಜ ಸ್ತ್ರೀಯರಿಗೆ ಸಂಬಂಧಗಳ ಬಲೆ ಹೆಣೆದಿದೆ. ಮಹಿಳೆಯರಿಗೆ ತೋರುವ ಅಸಮಾನತೆ,ಶೋಷಣೆ,ದಬ್ಬಾಳಿಕೆ,ಪುರುಷ ಶ್ರೇಷ್ಟ ಎನ್ನುವ ಮನೋ ಭಾವನೆ ಪರಂಪರೆಯಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಮಹಿಳೆ ಎಂದರೆ ಸಾಕು ಸೇವೆ,ಶಾಂತಿ,ತ್ಯಾಗ ಸಹನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಿದರೆ ಆಕೆ ಹೆಣ್ಣು ಎನ್ನುವಂತಾಗಿದೆ. 

 ‘ ಹೆಣ್ಣು ‘ ತಾಯಿಯಾದಾಗ ; ಬದುಕು ನಿಶ್ಚಿಂತೆಯಾಗಿರುತ್ತದೆ . ‘ ಹೆಣ್ಣು ‘ ಹೆಂಡತಿಯಾದಾಗ ; ಬದುಕು ಸ್ವರ್ಗವಾಗಿರುತ್ತದೆ . ‘ ಹೆಣ್ಣು ಮಗುವಾದಾಗ ; * ಬದುಕು ಜವಾಬ್ದಾರಿಯಾಗಿರುತ್ತದೆ .